ಸಿಂಧನೂರು: 4- ತಾಲೂಕಿನ ಅಂಬಾಮಠಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಭೂಮಿ ಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆಂದು ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು. ಗುರುವಾರ ಬೆಳಿಗ್ಗೆ ಅಂಬಾ ಮಠದಲ್ಲಿ ಜಾತ್ರೆ ನಿಮಿತ್ತ ಪೂರ್ವ ಸಭೆ ನಡೆಸಿ ರಾಜ್ಯದ ಧರ್ಮಸ್ಥಳ,ಹಾಸನಾಂಬೆ ಮಾದರಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರ .ಲೈಟಿಂಗ್.ಚರಂಡಿ .ಪುಟ್ ಪಾತ್ ರಥ ಬೀದಿ,ಶೌಚಾಲಯ ,ಪ್ರಸಾದ ನಿಲಯ, ಆಸ್ಪತ್ರೆ, ಪೊಲೀಸ್ ಠಾಣೆ, ಬಯಲು ಮಂದಿರ ಸೇರಿದಂತೆ
ಕೆ.ಆರ್.ಐ.ಡಿ.ಎಲ್ ಹಾಗೂ ಕೆ.ಕೆ. ಆರ್.ಡಿ.ಬಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.ದೇವಸ್ಥಾನ ಕಟ್ಟಡ 6 ಕೋಟಿ 63 ಲಕ್ಷ ರೂ ಸಂಪೂರ್ಣ ಅಭಿವೃದ್ಧಿ ಪಡಿಸಿ ದೇಶದಲ್ಲಿ ಮಾದರಿಯ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಹಣ ದುರುಪಯೋಗ ಆರೋಪ ಶುದ್ದ ಸುಳ್ಳು. ದೇವಸ್ಥಾನ ಪವಿತ್ರ
ಸ್ಥಳ ಯಾವುದೇ ಕಾರಣಕ್ಕೆ ಒಂದು ನಯಾಪೈಸೆ ದುರುಪಯೋಗ ಆಗಿಲ್ಲ. ದೇವಸ್ಥಾನದ ಶ್ರೀ ಚಕ್ರ ಪವಿತ್ರತೆ ಉಳಿಯಬೇಕು ಎಂದು ಅರ್ಚಕರು ಹೇಳಿದ ಕಾರಣ ಅದನ್ನು ಅಲ್ಲಿಯೇ ಉಳಿಸಲಾಗಿದೆ.ಕಟ್ಟಿದ ದೇವಸ್ಥಾನದ ಕಟ್ಟಡ ತೆರವುಗೊಳಿಸಿಲ್ಲ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ ವಾಸ್ತು.ಆಯಾ.ಮುಜರಾಯಿ
ಇಲಾಖೆ ಅಭಿಪ್ರಾಯ ಒಳಗೊಂಡು ದೇವಸ್ಥಾನ ನಿರ್ಮಾಣ ಆಗಬೇಕಾಗಿದೆ. ಇದರಲ್ಲಿ ರಾಜಕೀಯ ಬಣ್ಣ ಬಳಿಯಬಾರದು.ಶಾಸ್ತ್ರ ಬದ್ದವಾಗಿ ಕಟ್ಟಿ ಪ್ರವಾಸಿ ತಾಣವಾಗಿ ಭಕ್ತರಿಂದ ಆಕರ್ಷಣೆಗೊಳಿಸಬೇಕು ಎಂದರು. ಈಸಂದರ್ಭದಲ್ಲಿ ಮಾಜಿ ಜಿಲ್ಲಾಪಂಚಾಯತ ಸದಸ್ಯ ಬಸವರಾಜ ಹಿರೇಗೌಡ.ಎನ್. ಅಮರೇಶ.ರಾಜುಗೌಡ.ದೇವಸ್ಥಾನ ಸಮತಿ ಅಧ್ಯಕ್ಷ ರಂಗನಗೌಡ ಗೋರೆಬಾಳ,ಸ್ತ್ರೀ ಶಕ್ತಿ ತಾಲೂಕ ಘಟಕ ಅಧ್ಯಕ್ಷ ಶ್ರೀ ದೇವಿ ಶ್ರೀನಿವಾಸ,ತಹಶಿಲ್ಪಾರ ಅರುಣ್ ಕುಮಾರ್ ದೇಸಾಯಿ.ಇಒ ಚಂದ್ರಶೇಖರ. ಪೌರಾಯುಕ್ತ ಪಾಂಡುರಂಗ ಇಟಗಿ ಸೇರಿದಂತೆ ವಿವಿಧ ಇಲಾಖೆ ಗಳ ಅಧಿಕಾರಿಗಳು ಉಪಸ್ಥಿತರಿದ್ದರು

