ಸಿಂಧನೂರು : ಕರುನಾಡ ಕವಿ ಕಾವ್ಯ ಪ್ರತಿಭಾ ಸಿಂಚನ ವೇದಿಕೆ ಸಿಂಧನೂರು, ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು, ಶ್ರೀ ಸುಕ್ಷೇತ್ರ ಗದ್ರಟಗಿ ಚೌಡೇಶ್ವರಿ ದೇವಿ ಸಕಲ ಭಕ್ತರ ಬಳಗ ವತಿಯಿಂದ ಅರ್ಪಿಸುವ
ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮತ್ತು ವಿವಿಧ ಸಾಹಿತಿಗಳ ಕೃತಿಗಳ ಪ್ರದರ್ಶನ ಕಾಯ೯ಕ್ರಮ ನೆರವೇರಿತು. ಇಂದು ಸಿಂಧನೂರು ತಾಲೂಕಿನ ಗದ್ರಟಗಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯದ ಆಲಯದಲ್ಲಿ
ಶ್ರೀ ಹೆಚ್‌.ಎಂ.ಶ್ರೀ ಶೈಲ ಉಪನ್ಯಾಸಕರು ಮತ್ತು ಲೇಖಕರು ಸಿಂಧನೂರು ಇವರು ರಚಿಸಿದ ಶ್ರೀ ಚೌಡೇಶ್ವರಿ ದೇವಿಯ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮತ್ತು ವಿವಿಧ ಸಾಹಿತಿಗಳ ಕೃತಿಗಳ ಪ್ರದರ್ಶನ ಕಾಯ೯ಕ್ರಮ ಏಪ೯ಡಿಸಲಾಗಿತ್ತು.

ಈ ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕರುನಾಡ ಕವಿ ಕಾವ್ಯ ವೇದಿಕೆ ಸದಸ್ಯರಾದ ಶ್ರೀ ಪಿ.ವೆಂಕಟೇಶ್ ಬಾಗಲವಾಡ ವಹಿಸಿದ್ದರು. ಇವರು ಕಾಯ೯ಕ್ರಮದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ತಂದೆ ತಾಯಿ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು‌.
ಧ್ವನಿ ಸುರುಳಿಗೆ ರಾಗ ಸಂಯೋಜನೆ ನೀಡಿ ಗೀತೆಯನ್ನು ಹಾಡಿದ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರು, ಶ್ರೀ ವಿರೇಶ ಸಾಲಿಮಠ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ಮಾಡ ಸಿರವಾರ ಇವರು ಸಂಗೀತದಿಂದ ಮನಶ್ಯಾಂತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಗೀತೆಯ ಸಂಗೀತ ಸಂಯೋಜನೆ ಬಿ.ಆರ್.ಶಾಮೀದ್ ಕಂದಗಲ್
ಧ್ವನಿ ಮುದ್ರಣ ಸಾಜೀದ್ ರಿಕಾರ್ಡಿಂಗ್ ಸ್ಟೂಡಿಯೋ ಸಿಂಧನೂರು.ಸಿಂಧನೂರು ಪೊಲೀಸ್ ಇಲಾಖೆ ಅಧಿಕಾರಿಗಳಾದ ಶ್ರೀ ಎಸ್.ಎಂ.ವಿರೇಶ ಉಪಸ್ಥಿತರಿದ್ದರು ಕಾರ್ಯಕ್ರಮದ ಅನಿಸಿಕೆಗಳ ಅಂಚಿಕೊಂಡು ಪ್ರತಿಯೊಬ್ಬ ಜೀವನಶೈಲಿಯೂ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಜೊತೆಗಿನ ನಂಟು ನೆಮ್ಮದಿಯ ಜೀವನ ನಡೆಸಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಜೊತೆಗೆ ಮೊದಲಿಗೆ ಗೀತೆಗಳಾದ ಸಿಂಧನೂರು ನಾಡ ಚಂದ,ಸಿಂಧೂರ ಚೆಲುವೆ, ಮಗುವೆ ನೀನು ನಕ್ಕರೆ, ಹಾಲು ಜೇನು ಸಕ್ಕರೆ. ಹುಟ್ಟು ಹಬ್ಬದ ಗೀತೆ, ಚಿಕ್ಕ ಮಕ್ಕಳ ಹಾಡುಗಳು ಬರೆದಿದ್ದಾರೆ. ಅದೇ ರೀತಿಯಾಗಿ ಶ್ರೀ ಸುಕ್ಷೇತ್ರ ಗದ್ರಟಗಿ ಚೌಡೇಶ್ವರಿ ಭಕ್ತಿಗೀತೆ ರಚನೆಕಾರ ಶ್ರೀ ಹೆಚ್. ಎಂ.ಶ್ರೀಶೈಲ ಇವರು ಪ್ರಾಸ್ತಾವಿಕವಾಗಿ ಗೀತೆ ರಚನೆಗೆ ತಾಯಿ ಶ್ರೀ ಚೌಡೇಶ್ವರಿ ದೇವಿ ಪ್ರೇರಣೆಯಾಗಿದ್ದಾಳೆ. ಬರವಣಿಗೆಗೆ ಒಂದು ಶಕ್ತಿಯುತ ಆಯುಧವಾಗಿದೆ ಅದನ್ನು ಬಳಸಲು ಮೊದಲು ಪೂಜಿಸು ಮನದಲಿ ಆರಾಧಿಸಬೇಕು ಅಂದಾಗ ಜ್ಞಾನ ಬೆಳಕಿನಂತೆ ಬೆಳಗುವುದು ಎಂದು ತಿಳಿಸಿದರು.

ಪ್ರಾಥ೯ನೆಯನ್ನು ಪ್ರಾಥಮಿಕ ಶಾಲೆಯ ರವಿಕುಮಾರ್ ಶಿಕ್ಷಕರು ನೆರವೇರಿಸಿದರು. ಶಾಲಾ ಮಕ್ಕಳು ಮತ್ತು ಗದ್ರಟಗಿ ಸಕಲ ಭಕ್ತರು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಲೇಖಕರ ಕೃತಿಗಳನ್ನು ಪ್ರದಶ೯ನಕ್ಕೆ ಇಡಲಾಗಿತ್ತು. ಕೆಲವು ಆಸಕ್ತರು ಕೃತಿಗಳನ್ನು ಕೊಂಡೊಯ್ದರು.
ವೇದಿಕೆಯಲ್ಲಿ ಊರಿನ ಗಣ್ಯರಾದ ಶ್ರೀ ಕರಿಬಸಯ್ಯ ಸ್ವಾಮಿ, ಶ್ರೀ ಚನ್ನನಗೌಡ ಪಾಟೀಲ್, ಶ್ರೀ ಅಮರಯ್ಯ ಸ್ವಾಮಿ ಆಲಯದ ಅರ್ಚಕರು, ಬಸವರಾಜ್ ದೇವರಡ್ಡಿ ಮತ್ತು ಉಪನ್ಯಾಸಕರು ಹಾಗೂ ಕವಿ ಬಳಗ ಸೇರಿದ್ದರು. ದೇವಸ್ಥಾನದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆಳದಪ್ಪ ಇಂಪಾದ ಗಾಯನದೊಂದಿಗೆ ವಂದನಾಪ೯ಣೆಯನ್ನು
ನೆರವೆರಿಸಿದರು.

Leave a Reply

Your email address will not be published. Required fields are marked *