ಹಾಲಾಪೂರ*: ತುಂಗಭದ್ರಾ ಎಡದಂಡೆ 62 ರಿಂದ 74ನೇ ಉಪ ಕಾಲುವೆಗಳಿಗ ಸರಿಯಾದ ರೀತಿಯಲ್ಲಿ ನೀರು ಬಿಡುತ್ತಿಲ್ಲ ಎಂದು

ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ರೈತರ ಬೃಹತ್ ಪ್ರತಿಭಟನೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ರೈತರು ನಿರೀಕ್ಷೆಗೂ ಮೀರಿ ಒಗ್ಗಟ್ಟು ಪ್ರದರ್ಶನ ಕಂಡುಬಂದಿತು. ಈ ಒಂದು ಹೋರಾಟದಲ್ಲಿ ಪೂಜ್ಯ ಶ್ರೀ ಮರಿಬಸವರಾಜ ದೇಸಿಕೇಂದ್ರ ಮಹಾಸ್ವಾಮಿಗಳು ಉಟಕನೂರು, ಪೂಜ್ಯಶ್ರೀ ಬಸವಪ್ರಸಾದ ಶರಣರು ಇರಕಲ್ ಮಠ, ಪೂಜ್ಯಶ್ರೀ ದಂಡಗುಂಡಪ ತಾತ ಜಂಗಮರಳ್ಳಿ ಆಶೀರ್ವಾದದೊಂದಿಗೆ ಜೊತೆಗೆ ಮರಿಗೌಡ ಮಾಲಿಪಾಟೀಲ್ ಹಾಗೂ ಪಾಟೀಲ್ ನ್ಯೂಜ ಚಾನೆಲ್ ಮತ್ತು ಅನೇಕ ರೈತ ಮುಖಂಡರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು , ರೈತರು ಬೆಳೆದ ಭತ್ತಕ್ಕೆ ಡಿಸೆಂಬರ್ 15ರವರೆಗೆ ನೀರು ಹರಿಸಿ, ಒಳ್ಳೆಯ ಗೇಜು ಮತ್ತು ತ್ರಡ್ಡನ್ನು ಕಾಪಾಡಿ ರೈತರಿಗೆ ಅನುಕೂಲ ಮಾಡಬೇಕು, ಹಾಗೆ ರೈತರ ಮೇಲೆ ದಾಖಲಾದ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು, ಇಲ್ಲವಾದರೆ ಮತ್ತಷ್ಟು ಉಗ್ರವಾದ ಹೋರಾಟವನ್ನು ಮಾಡಬೇಕಾಗ್ತದೆ ಎಂದು ಮಸ್ತಾನ್ ನಾಯಕ ರೈತ ಸಂಘದ ರಾಜ್ಯಾಧ್ಯಕ್ಷರು ಹಾಗೂ ಎಲ್ಲಾ ರೈತರು ಸೇರಿ ಸ್ಥಳದಲ್ಲಿದ್ದ ತಹಸಿಲ್ದಾರ ಮಂಜುನಾಥ ಭೂಗವತಿ, ನೀರಾವರಿ ಇಲಾಖೆ ಇಇ ವಿಜಯಲಕ್ಷ್ಮಿ ಪಾಟೀಲ ಅವರಿಗೆ ಎಚ್ಚರಿಕೆಯನ್ನು ನೀಡಿದರು. ಹಾಲಾಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಸಾವಿರಾರು ರೈತರು ಸೇರಿ ಒಗ್ಗಟ್ಟು ಪ್ರದರ್ಶನ ವಿಶೇಷತೆಯಾಗಿತ್ತು , ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಸಿರಿವಾರ ಹಾಗೂ ಮಾನ್ವಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ , ಕವಿತಾಳ್ ಪಿಎಸ್ಐ ಹಾಗೂ ರಿಸರ್ವ್ ಪೊಲೀಸ್ ಸೇರಿ ರಕ್ಷಣೆ ನೀಡಿದರು. ಈ ಸಂದರ್ಭದಲ್ಲಿ ಹಾಲಾಪುರ ಆಗ ಸುತ್ತುಮುತ್ತಲಿನ ರೈತ ಮುಖಂಡರು, ರೈತರು ಸಹಸ್ರ ಸಂಖ್ಯೆಯಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *

You missed

ಸಿದ್ದರಾಮಯ್ಯ ಹಾಗೂ ಮಹದೇವಪ್ಪ ನಡುವಿನ ಭಿನ್ನಾಭಿಪ್ರಾಯದ ವಾದಗಳಿಗೆ ತೆರೆ ಎಳೆದ ಡಾ. ಯತೀಂದ್ರ ತಾಂಡವಪುರ ನವೆಂಬರ್ 7 ನಮ್ಮ ತಂದೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಮಾಜಿ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಸಣ್ಣಪುಟ್ಟ ವಿಚಾರಗಳನ್ನು ಹೊರತುಪಡಿಸಿದರೆ ಅವರ ಸ್ನೇಹ ಬಾಂಧವ್ಯ ಗಟ್ಟಿಯಾಗಿದೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ನಗರಭಿವೃದ್ಧಿ ಸಚಿವರಾದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ ರವರು ಸ್ಪಷ್ಟಪಡಿಸಿದರು ಅವರು ಎಂದು ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಾಗ ಮಾಧ್ಯಮದವರು ಈ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯ ಮಹಾದೇವಪ್ಪನವರ ನಡುವೆ ಯಾವುದೇ ವೈಮನಸಿಲ್ಲ ಅವರ ಸ್ನೇಹ ಗಟ್ಟಿ ಆಗಿದೆ ನಾನೇ ಹೋಗಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಇದೇ ನವಂಬರ್ 26ರಂದು ಸರ್ಕಾರದಿಂದ ನಡೆಯುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತಾವು ಭಾಗವಹಿಸಬೇಕು ಕಾರ್ಯಕ್ರಮಕ್ಕೆ ಸಹಕಾರಿ ನೀಡಬೇಕೆಂದು ಕೋರಿದೆ ಅವರು ಸಹ ಒಪ್ಪಿಕೊಂಡು ಬರುವುದಾಗಿ ಹೇಳಿದ್ದಾರೆ ಕೆಲವು ಸಂಘಟನೆಗಳು ಮಾಡಿದರೆ ಮೊದಲು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಹದೇವಪ್ಪನವರು ಹೇಳಿದ್ದಾರೆ ಅರಮನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅರಮನೆ ಕಟ್ಟಿದವರು ಮಹಾರಾಜರೇ ಇರಬಹುದು ಮಹಾರಾಜರು ಅರಮನೆ ಕಟ್ಟಲು ಸಾರ್ವಜನಿಕರ ತೆರಿಗೆ ಹಣದಿಂದ ಅರಮನೆಯನ್ನು ಕೊಟ್ಟಿದ್ದಾರೆ ಅದು ಸಾರ್ವಜನಿಕ ಸ್ವತ್ತು ಎಂದು ಹೇಳಿದ ಸಚಿವರು ಜಂಬೂಸವಾರಿ ಸಮಯದಲ್ಲಿ ಅಂಬಾರಿಯನ್ನು ನಾವು ಬಾಡಿಗೆ ರೂಪದಲ್ಲಿ ಅರಮನೆ ವತಿಯಿಂದ ಪಡೆದುಕೊಳ್ಳುತ್ತೇವೆ ಎಂದು ವಿವರವಾಗಿ ತಿಳಿಸಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕುತಂತ್ರ ನಡೆದಿತ್ತಲ್ಲ ಅದನ್ನು ಪತ್ತೆಹಚ್ಚಲು ಪೊಲೀಸರಿಗೆ ನಮ್ಮ ತಂದೆ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ ದೂರಿನ ಅನ್ವಯ ಈಗಾಗಲೇ ಪೊಲೀಸ್ರು ಎಲ್ಲಾ ರೀತಿಯ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಮತ್ತು ಭರವಸೆ ಇದೆ ಎಂದು ಹೇಳಿದ ಸಚಿವರು ಆದಷ್ಟು ಬೇಗನೆ ಈಸ್ಟಿಂಗ್ ಆಪರೇಷನ್ ಮೂಲ ರೂವಾರಿ ಯಾರು ಎಂಬುದನ್ನು ಪೊಲೀಸ್ ಅಧಿಕಾರಿಗಳು ಪತ್ತೆಚ್ಚಬೇಕು ಅವರನ್ನು ಪತ್ತೆ ಹಚ್ಚಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಸಚಿವರು ಹೇಳಿದರು