ತಾಂಡವಪುರ ನವಂಬರ್ 6 ಮೈಸೂರ್ ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮರೆಸೆ ಮಾಕನ ಹುಂಡಿ ಗ್ರಾಮಗಳ ಸುತ್ತಮುತ್ತ ಬಾರಿ ಗಾತ್ರದ ವ್ಯಾಘ್ರ ನು ಸಂಚಾರ ಮಾಡುತ್ತ ಗ್ರಾಮಸ್ಥರಲ್ಲಿ ಆತಂಕ ಭಯದ ವಾತಾವರಣ ನಿರ್ಮಾಣವಾಗಿದೆ
ನಿನ್ನೆ ರಾತ್ರಿ ಮರೆಸೆ ಮಾಕನ ಹುಂಡಿ ಮುಖ್ಯ ರಸ್ತೆ ಮರ ಸೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಸಂಚಾರ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸರಿಯಾಗಿದ್ದು ಇದನ್ನು ಕಂಡ ಗ್ರಾಮಸ್ಥರು ಭಯಭರಿತರಾಗಿದ್ದು ಮೊನ್ನೆ ಮಾಕನ ಹುಂಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿಹುಲಿರಾಯನು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ
ಸುಮಾರು ಒಂದು ವಾರಗಳಿಂದ ಈ ಹುಲಿರಾಯನು ಗ್ರಾಮಗಳ ಸುತ್ತಮುತ್ತ ಸಂಚಾರ ಮಾಡುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡು ಹುಲಿಯನ್ನು ಬೇಕು ಮುಂದಾಗುವ ಅನಾಹುತಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಗ್ರಾಮಸ್ಥರು ನಿರ್ಭಯವಾಗಿ ರಸ್ತೆಯಲ್ಲಿ ಓಡಾಡಲು ಮತ್ತು ರೈತರು ತಮ್ಮ ಜೀವನಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಮರಸೇ ಮತ್ತು ಮಾಕನ ಹುಂಡಿ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ
