ಕವಿತಾಳ
ಪಟ್ಟಣದ ಕಲ್ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಮ.ನಿ.ಪ್ರ. ಲಿಂ. ಶ್ರೀ ಬಸವಲಿಂಗ ಮಹಾಸ್ವಾಮಿಗಳ 9ನೇ ಪುಣ್ಯಾರಾಧನೆ ಪ್ರಯುಕ್ತ ಇಂದು ಶ್ರೀ ಮಠದಲ್ಲಿ ರ್ಶರೀಗಳ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಇಂದಿನ ಪೀಠಾಧಿಪತಿಗಳಾದ ಅಭಿನವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಂತರ ಜಂಗಮ ದಾಸೋಹ ಮತ್ತು ಭಕ್ತಾದಿಗಳಿಗೆ ಮಹಾಪ್ರಸಾದ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಲಿಂ.ಬಸವಲಿಂಗ ಮಹಾಸ್ವಾಮಿಗಳ ಪೂರ್ವಾಶ್ರಮದ ಸಹೋದರರಾದ ವಿಶ್ವನಾಥ ಹಿರೇಮಠ, ಮಹಾಂತೇಶ ಹಿರೇಮಠ ಮತ್ತು ಕುಟುಂಬ ವರ್ಗ ಹಾಗೂ ಶ್ರೀಮಠದ ಭಕ್ತಾದಿಗಳ ಉಪಸ್ಥಿತರಿದ್ದರು.
