ಲಿಂಗಸಗೂರು : ನ : 04 –
ಇತ್ತೀಚೆಗೆ ಬೆಂಗಳೂರಿನ ವೈಟ್ಫೀಲ್ಡ್ನ ವಕೀಲರಾದ ಮಂಜುನಾಥ, ಅನ್ನಪೂರ್ಣೆಶ್ವರಿ ನಗರದ ವಕೀಲರಾದ ಶ್ರೀರಾಮ್ ಅವರ ಬರ್ಬರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲರಾದ ವೆಂಕಟರಮಣ ಸನ್ನಕ್ಕಿ ಅವರ ಮೇಲೆ ನಡೆದ ಕೊಲೆ ಯತ್ನದ ಘಟನೆಗಳನ್ನು ಖಂಡಿಸಿ ಲಿಂಗಸಗೂರಿನ ವಕೀಲರ ಸಂಘದ ತಾಲೂಕ ಅಧ್ಯಕ್ಷ ಭೂಪನಗೌಡ ವಿ ಪಾಟೀಲ್ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು ವಕೀಲರು ತಮ್ಮ ವೃತ್ತಿಯನ್ನು ನಿರ್ಭೀತಿಯಿಂದ ಹಾಗೂ ಸುರಕ್ಷಿತವಾಗಿ ನಿರ್ವಹಿಸಲು ಅಗತ್ಯವಾದ ಭದ್ರತೆಯ ಕೊರತೆಯನ್ನು ಖಂಡಿಸಿ, ವಕೀಲರ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಸಮಗ್ರ ವಕೀಲರ ರಕ್ಷಣಾ ಕಾಯ್ದೆಯನ್ನು ಕಠಿಣ ಕ್ರಮಗಳೊಂದಿಗೆ ಜಾರಿಗೆ ತರಬೇಕೆಂದು ದಿನಾಂಕ 03-11-2026 ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿ ಸಂಬಂಧಪಟ್ಟ ಪೋಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ವಕೀಲರ ಹಿತರಕ್ಷಣೆಯನ್ನು ಕಾಪಾಡಬೇಕೆಂದು ಹಾಗೂ ವಕೀಲರ ರಕ್ಷಣಾ ಕಾಯ್ದೆಯನ್ನು ಕಠಿಣ ಕ್ರಮಗಳೊಂದಿಗೆ ಜಾರಿಗೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು . ಈ ಸಂದರ್ಭದಲ್ಲಿ ನಾಗರಾಜ್ ಗಸ್ತಿ ಉಪಾಧ್ಯಕ್ಷರು , ಈಶ್ವರ್ ಜಾದವ್ ಪ್ರಧಾನ ಕಾರ್ಯದರ್ಶಿ , ಹನುಮಂತ ರೆಡ್ಡಿ ಜಂಟಿ ಕಾರ್ಯದರ್ಶಿ , ಶರಣುಬಸವ ಹುನಕುಂಟಿ, ಪರಶುರಾಮ್ , ಆಶೀಕ್ ಅಹಮ್ಮದ್ , ಸಂಜೀವ್ ಗೌಡ ಐದಭಾವಿ , ಬಸವರಾಜ್ ತಿಮ್ಮನಪ್ಯಾಟಿ , ಶಶಿಧರ್ ಹೊಸಮನೆ , ಹುಚ್ಚರೆಡ್ಡಿ , ಮೋಹಿನ್ ಪಟೇಲ್ , ಶಿವಶಂಕರಪ್ಪ , ಆದಪ್ಪ , ವೀಣಾ , ನಾಗವೇಣಿ , ಫರಿದ , ಶಿವರಾಜ್ ಪಾಟೀಲ್ , ಜಂಬಣ್ಣ , ಆಡಿವೇಶ , ಸುರೇಶ , ಮಲ್ಲಿಕಾರ್ಜುನ ಗೊನ್ವರ್ ಸೇರಿದಂತೆ ಇತರರು ಇದ್ದರು .
