ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಮದಿಂದ ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರದ ಕರಾಡ್ ಜತ್ ಹಾಗೂ ಸಾತಾರ್ ಗೆ ಹೋಗುವ ನೂತನ ರಸ್ತೆ ಸಾರಿಗೆ ಬಸ್ ನ ಸೇವೆ ಆರಂಭವಾಗಿದೆ.ಈ ನೂತನ ಬಸ್ ಸೇವೆ ಜುಲೈ 5 ಸೋಮವಾರದಿಂದ ಆರಂಭಗೊಂಡಿದ್ದು ಬಸ್ಸು ವಿಜಾಪುರದಿಂದ ಬೆಳಿಗ್ಗೆ 7:30ಕ್ಕೆ ದೇವರ ಹಿಪ್ಪರಗಿ ಮಾರ್ಗವಾಗಿ ಬಿಬಿ ಇಂಗಳಗಿ ಗ್ರಾಮದ ಮೂಲಕ ಕಲಕೇರಿಗೆ ತಲುಪುವುದು. ನಂತರ ಅಲ್ಲಿಂದ ಬೆಳಗ್ಗೆ 9-30ಕ್ಕೆ ವಿಜಯಪುರ ಮಾರ್ಗವಾಗಿ ಜತ್, ವೀಟಾ, ಕರಣ್, ಸಾತಾರಕ್ಕೆ ಹೋಗುವುದು. ನೂತನ ಬಸ್ಸಿನ ಸೇವೆ ಆರಂಭಿಸುವ ಮುನ್ನ ಕಲಿಕೇರಿ ಗ್ರಾಮಸ್ಥರು ಬಸ್ಸನ್ನು ಗ್ರಾಮದ ಶ್ರೀ ವೀರಗಂಟಿ ಮಡಿವಾಳೇಶ್ವರ ದೇವಸ್ಥಾನದ ಮುಂದೆ ನಿಲ್ಲಿಸಿ ವಿಶೇಷ ಪೂಜೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಬಸ್ಸಿನ ನೂತನ ಚಾಲಕ ನಿರ್ವಾಹಕ ಹಾಗೂ ಬಸ ನಿಲ್ದಾಣದ ನಿಯಂತ್ರಣಾಥಿಕಾರಿಗೆ ಸನ್ಮಾನಿಸಿ ಗೌರವಿಸಿದರು.

