ಮಾನ್ವಿ -: ಮಾನ್ವಿ ತಾಲೂಕು ಕುರುಬರ ಸಂಘ (ರಿ) ವತಿಯಂದ ನೂತನ ಕಾರ್ಯಲಯದ ಉದ್ಧಾಟನಾ ಸಮಾರಂಭ ಹಾಗೂ ರಾಯಚೂರು ಜಿಲ್ಲಾ ಹಾಲುಮತ ಸಮಾಜದ ಸ್ಥಿತಿಗತಿಗಳ ಕುರಿತು ಸಮಾಲೋಚನಾ ಸಭೆಯನ್ನು ಜುಲೈ 12ರಂದು ಭಾನುವಾರ ಹಮ್ಮಿಳ್ಳಲಾಗಿದೆ.
ಪಟ್ಟಣದ ಸರ್ಕಾರಿ ಪದವಿ ಕಾಲೇಜು ಸಮೀಪದ ಕನಕದಾಸ ಹಾಸ್ಟೆಲಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ನೂತನ ಕಾರ್ಯಲಯವನ್ನು ಉದ್ಘಾಟಸುವ ಮೂಲಕ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಮತ್ತೊಂದು ಮಹತ್ತದ ಹೆಜ್ಜೆಯಾಗಲಿದೆ.
ಈ ಸಭೆಯಲ್ಲಿ ಸಮಾಜದ ಪ್ರಸ್ತುತ ಸ್ಥಿತಿಗತಿಗಳು, ಸಮಾಜ ಎದುರಿಸುತ್ತಿರುವ ಸಮಸ್ಯೆಗಳು, ಶೈಕ್ಷೆಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮುಂದಿನ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಉದ್ಧಾಟನಾ ಸಮಾರಂಭದ ಅಂಗವಾಗಿ ನಡೆಯುವ ಸಮಾಲೋಚನಾ ಸಭೆಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಸಮಾಜದ ಮುಖಂಡರು ಮತ್ತು ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಸಮಾಜದ ಏಕತೆ ಹಾಗೂ ಸಂಘಟನಾ ಬಲವರ್ಧನೆಗೆ ಈ ಸಭೆ ವೇದಿಕಯಾಗಲಿದೆ.
ತಾಲೂಕಿನ ಸಮಸ್ತ ಕುರುಬ ಸಮಾಜದ ಬಾಂಧವರು ಹಾಗೂ ಹಾಲುಮತ ಸಮಾಜದ ಸದಸ್ಯರು ಹೆಚ್ಚಿಸ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಾನ್ವಿ ತಾಲೂಕು ಕುರುಬ ಸಂಫದ ಅಧ್ಯಕ್ಷರಾದ ಸತ್ಯನಾರಾಯಣ ಆರ್ ಮುಷ್ಟೂರು ಅವರು ಪ್ರಕಟಣಿಯಲ್ಲಿ ಮನವಿ ಮಾಡಿದ್ದಾರೆ.

