ಇಂದು ತಾಲೂಕಿನ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಆಯೋಜಿಸಲಾಗಿದ್ದು ನ್ಯಾ. ಉಂಡಿ ಮಂಜುಳಾ ಶಿವಪ್ಪ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರ ನೇತೃತ್ವದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ಬಾಕಿ ಪ್ರಕರಣಗಳಲ್ಲಿ 685 ಪ್ರಕರಣಗಳು ಇಂದು ಇತ್ಯಾರ್ಥಪಡಿಸಲಾಗಿದ್ದು ಇದರ ಒಟ್ಟು ಮೊತ್ತ 2,28,09,710 ರೂ.ಇರುತ್ತದೆ. ಹಾಗೂ ವಿವಾಹ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳಿಗೆ ನ್ಯಾಯಾಧೀಶರು ಮನಹೊಲಿಸಿ ಪರಸ್ಪರ ಹೂವಿನಹಾರ ಬದಲಿಸುವ ಮೂಲಕ ದಂಪಗಳನ್ನು ಒಗ್ಗೂಡಿಸಿ ಪ್ರಕರಣವನ್ನು ಇತ್ಯಾರ್ಥಗೊಳಿಸಿದ್ದಾರೆ, ಮತ್ತು ನ್ಯಾ. ಅಂಬಣ್ಣ ಕೆ. ಪ್ರಧಾನ ಸಿವಿಲ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ಬಾಕಿ ಪ್ರಕರಣಗಳಲ್ಲಿ 878 ಪ್ರಕರಣಗಳು ಇಂದು ಇತ್ಯಾರ್ಥಪಡಿಸಲಾಗಿದ್ದು ಇದರ ಒಟ್ಟು ಮೊತ್ತ 15,94,518 ರೂ.ಇರುತ್ತದೆ. ಹಾಗೂ ನ್ಯಾ. ಸಿದ್ರಾಮ ರೆಡ್ಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನೇತೃತ್ವದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ಬಾಕಿ ಪ್ರಕರಣಗಳಲ್ಲಿ 765 ಪ್ರಕರಣಗಳು ಇತ್ಯಾರ್ಥಪಡಿಸಲಾಗಿದ್ದು ಇದರ ಒಟ್ಟು ಮೊತ್ತ 12,95,753 ರೂ.ಇರುತ್ತದೆ. ಮೂರು ನ್ಯಾಯಾಲಯ ದಲ್ಲಿ ಒಟ್ಟು ವ್ಯಾಜ್ಯಪೂರ್ವ ಪ್ರಕರಣಗಳು 7522 ಪ್ರಕರಣಗಳು ಇತ್ಯಾರ್ಥಪಡಿಸಲಾಗಿದ್ದು ಇದರ ಒಟ್ಟು ಮೊತ್ತ. 53,10,955 ರೂ ಆಗಿರುತ್ತದೆಂದು ತಿಳಿದು ಬಂದಿದೆ . ಈ ಸಂದರ್ಬದಲ್ಲಿ ಹನುಮಂತಪ್ಪ .ವೈ ವಕೀಲರು , ನಾಗರಾಜ ಏಲಿಗಾರ, ಭೂಪನಗೌಡ, ಬಾಲರಾಜ ಸಾಗರ, ಹಾಜಿಬಾಬ, ಉಪೇಂದ್ರ, ವಿಶ್ವನಾಥ, ಶೀವರಾಜ ಪಾಟೀಲ್, ಅಮರೇಶ, ಎಮ್.ಡಿ ಕೈಹೀಮ್, ಲೋಕೇಶ, ಆದಪ್ಪ, ಶಶಿಧರ, ವೀಣಾಶ್ರೀ, ಶಿವಕುಮಾರ ಸೇರಿದಂತೆ ಇತರೆ ವಕೀಲರು ಇದ್ದರು.

