ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಗಂಗಾಮತ ಸಮಾಜದಿಂದ ಗಂಗಾದೇವಿ ಗಂಗೆಸ್ಥಳ ಮತ್ತು ಭಾವಚಿತ್ರ ಮೆರವಣಿಗೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.
ಇಲ್ಲಿನ ಮುಖ್ಯರಸ್ತೆ ಬದಿಯಲ್ಲಿ ಗಂಗಾಮತ ಸಮಾಜದ ಗಂಗಾ ಪರಮೇಶ್ವರಿ ಸೇವಾ ಸಮಿತಿ ಟ್ರಸ್ಟ್ನ ನಾಮಫಲಕ ಉದ್ಘಾಟಿಸಲಾಯಿತು.
ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿ, ನಂತರ ಗಂಗೆಸ್ಥಳ ಮೆರವಣಿಗೆ ಜರುಗಿತು. ಪೂಜಾ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನೆರವೇರಿದವು.

ಮೆರವಣಿಗೆ ಗಂಗಾದೇವಿ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಎದುರು ಬಸವಣ್ಣ ಮೂಲಕ ಪುನಃ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.
ಮಹಿಳೆ ಕಳಸ, ಡೊಳ್ಳು ಕುಣಿತ ಸೇರಿದಂತೆ ನಾನಾ ಕಲಾ ಪ್ರಕಾರಗಳೊಂದಿಗೆ ವಿಜೃಂಭಣೆಯಿಂದ ಗಂಗಾದೇವಿ ಭಾವಚಿತ್ರ ಮೆರವಣಿಗೆ ನೆರವೇರಿತು.
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದವರು ಪಾಲ್ಗೊಂಡಿದ್ದರು. ನಂತರ ಅನ್ನದಾಸೋಹ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *