ಸಿಂಧನೂರು ಕೇಂದ್ರ ಬಸ್ ನಿಲ್ದಾಣದ ಛತ್ತು ಉದುರಿ ಬೀಳುತ್ತಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಏನಾದರೂ ಅನಾಹುತವಾದರೆ, ಯಾರು ಜವಾಬ್ದಾರರು, ಇದನ್ನು ತಕ್ಷಣ ರಿಪೇರಿ ಮಾಡುವಂತೆ ಸಮಾಜ ಸೇವಕ ಹಾಗೂ ಆಟೋ ಚಾಲಕ ಉಷ್ಮಾನ್ ಪಾಷಾ ಮಕಂದರ್ ಷಾ ಚಕ್ರವರ್ತಿ ಅವರು, ಡಿಪೋ ಮೆನೇಜರ್ ಅವರಿಗೆ ಮನವಿ ಮಾಡಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣದ ಮೂಲಕ ಪ್ರತಿದಿನವು ನೂರಾರು ವಾಹನಗಳು ಒಡಾಡುತ್ತಿದ್ದು, ಅಲ್ಲದೆ ದೊಡ್ಡ ಬಸ್ ನಿಲ್ದಾಣವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ಆತಂಕಕ್ಕೆ ಒಳಗಾಗಿದ್ದಾರೆ, ಈಗಲೋ ಆಗಲೋ ಮತ್ತೆ ಉದುರಿ ಬೀಳುವ ಹಂತದಲ್ಲಿದೆ. ಪ್ರಯಾಣಿಕರ ಮೇಲೆ ಬಿದ್ದು ಅಪಾಯವಾದರೆ, ಇದಕ್ಕೆ ಸಾರಿಗೆ ಸಂಸ್ಥೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದರು.
ಸಿಂಧನೂರು ಕೇಂದ್ರ ಬಸ್ ನಿಲ್ದಾಣದ ಛತ್ತು ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡು ಪ್ರಯಾಣಿಕರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಡಿಪೋ ಮೆನೇಜರ್ ಅವರಗೆ ಕೇಳಲು ಹೋದರೆ, ನೀನು ಯಾರು ಇದನ್ನೆಲ್ಲ ಕೇಳೋಕೆ ? ಪೋಟೋ ವಿಡಿಯೋ ತೆಗೆಯೋಕೆ ಎಂದು ಹೆದರಿಸಲು ಬರುತ್ತಾರೆ. ನಾನು ಸರಿಸುಮಾರು 30 ವರ್ಷಗಳಿಂದ ಆಟೋ ಒಡಿಸುತ್ತಲೆ ನಗರದಲ್ಲಿ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಸಮಾಜ ಸೇವೆ ಮಾಡುತ್ತಾ ಮಾಡಿದ್ದೇನೆ. ಇಲ್ಲಿನ ಸ್ಥಳೀಯ ಸಾರ್ವಜನಿಕರು, ಪ್ರಯಾಣಿಕರು ಇದರ ಬಗ್ಗೆ ಧ್ವನಿ ಎತ್ತಿ ಎಂದು ಹಲವಾರು ಜನರು ನನಗೆ ಹೇಳಿದ ಕಾರಣ ಡಿಪೋ ಮೆನೇಜರ್ ಅವರಿಗೆ ಕೇಳಿದರೆ, ನೀನು ಯಾರು ಇದನ್ನೆಲ್ಲ ಕೇಳೋಕೆ ಎಂದು ನನಗೆ ಬೆದರಿಕೆ ಹಾಕಿದರು
ಪ್ರಯಾಣಿಕರ ಮೇಲೆ ಛತ್ತು ಉದುರಿ ಬಿದ್ದು ಅಪಾಯ ಆಗುವುದಕ್ಕಿಂತ ಮುಂಚೆ ಸಾರಿಗೆ ಜಿಲ್ಲಾ ಅಧಿಕಾರಿಗಳು ಪ್ರಯಾಣಿಕರ ಹಿತದೃಷ್ಟಿಯಿಂದ ನಿರ್ಲಕ್ಷ್ಯ ಮಾಡದೆ, ರಿಪೇರಿ ಮಾಡಿಸಬೇಕು. ಮತ್ತು ಸಿಂಧನೂರು ಡಿಪೋ ಮೆನೇಜರ್ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.
ಸಮಾಜ ಸೇವಕ ಹಾಗೂ ಆಟೋ ಚಾಲಕ ಉಷ್ಮಾನ್ ಪಾಷಾ ಮಕಂದರ್ ಷಾ ಚಕ್ರವರ್ತಿ)


