ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಹಮ್ಮಿಕೊಂಡ ವೃಕ್ಷರೋಪಣ (ಸಸಿ ನೆಡುವ) ಕಾರ್ಯ ಕೇವಲ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳದೆ, ಬದಲಿಗೆ ಪ್ರಕೃತಿ ಮಾತೆಯ ಸೇವೆಗೆ ಒಂದು ಸತ್ಸಸಂಕಲ್ಪ ಮಾಡಿದ್ದೇವೆ. ಸನಾತನ ಧರ್ಮದಲ್ಲಿ ಪ್ರಕೃತಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಮರ, ಗಿಡ, ನದಿ, ಪರ್ವತಗಳಲ್ಲಿ ದೇವರನ್ನು ಕಾಣುವ ಶ್ರೇಷ್ಠ ಸಂಸ್ಕೃತಿ ಇದೆ ನಾವೆಲ್ಲರೂ ಒಟ್ಟಾಗಿ ಸಸಿಗಳನ್ನು ನೆಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಜಿ.ಕೆ.ವಿಶ್ವನಾಥ ಚೌಧರಿ ಹೇಳಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿನೆಟ್ಟು ಮಾತನಾಡಿದ ಅವರು, “ವೃಕ್ಷೋ ರಕ್ಷತಿ ರಕ್ಷಿತಃ” ಅಂದರೆ ನಾವು ವೃಕ್ಷಗಳನ್ನು ರಕ್ಷಿಸಿದರೆ, ಆ ವೃಕ್ಷಗಳು ನಮ್ಮನ್ನು ರಕ್ಷಿಸುತ್ತವೆ. ಇಂದು ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ, ಮಳೆ ಸರಿಯಾಗಿ ಆಗುತ್ತಿಲ್ಲ ಪರಿಸರ ಮಾಲಿನ್ಯ ಮಿತಿ ಮೀರುತ್ತಿದೆ. ಕೇವಲ ಗಿಡ ನೆಡುವುದರಿಂದ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸಿ ಮರಗಳನ್ನಾಗಿ ಮಾಡಬೇಕು. ಅಂದಾಗ ಮಾತ್ರ ಪರಿಸರ ಉಳಿಯಲಿಕ್ಕೆ ಸಾಧ್ಯವಾಗಬಹುದು ಎಂದರು.
ಈ ಸಂದರ್ಭದಲ್ಲಿ: ಜಿ.ಕೆ.ವಿಶ್ವನಾಥ ಚೌಧರಿ, ದೇವರಾಜ ಪಾಟೀಲ್, ಬಸವರಾಜ ಸಾಲಗುಂದಾ, ಪ್ರವೀಣಕುಮಾರ, ಸಂಗಯ್ಯ ಸಾಲಿಮಠ, ಸಿಬ್ಬಂದಿ ಮುಖ್ಯಗುರು, ಹಾಗೂ ಭಜರಂಗದಳದ ಮನೋಹರ್, ನಾಗೇಶ ಪವಾರ್, ವೀರೇಶ ನಾಯಕ, ಕೆ.ಶಿವು, ಎಸ್.ಆರ್.ಕೆ.ಶಿವಕುಮಾರ, ಮಲ್ಲಿಕಾರ್ಜುನ ಪಲ್ಲೆದ್, ಕೆ.ಶಿವಯ್ಯ, ರಾಜು, ಮಾತೃ ಶಕ್ತಿ ಮತ್ತು ದುರ್ಗವಾಹಿನಿ ಪ್ರಮುಖರಾದ ದೀಪಾ ಸಾಲಿಮಠ, ವಿಜಯಲಕ್ಷ್ಮಿ ಪಲ್ಲೆದ್, ಸುಜಾತ ಮಲ್ಲಾಪುರ, ಎಂ.ಸಂಗೀತ, ದೀಪಾ ನಾಯಕ್, ಸುಮಿತ್ರಾ ಹಿರೇಮಠ, ಸೇರಿದಂತೆ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

