ಬಳ್ಳಾರಿ / ಕಂಪ್ಲಿ : ಕಳೆದ ಕಳೆದ ನಾಲ್ಕು ನಾಲ್ಕು ತಿಂಗಳಿಂದ ಸರ್ಕಾರದ ವಿವಿಧ ಪಿಂಚಣಿ, ಮಾಸಾಶನಗಳು ಫಲಾನುಭವಿಗಳಿಗೆ ದೊರೆಯದೆ ತುಂಬಾ ತೊಂದರೆಯಲ್ಲಿದ್ದು, ಕೂಡಲೇ ಬಾಕಿ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಎಸ್. ಸಿ ‌ ಮೋರ್ಚಾ ತಾಲ್ಲೂಕು ಮಂಡಲ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಗುರುವಾರ ಸಲ್ಲಿಸಿದರು.

ಬಳಿಕ ಬಿಜೆಪಿ ಎಸ್.ಸಿ ಮೋರ್ಚಾ ತಾಲ್ಲೂಕು ಮಂಡಲ ಅಧ್ಯಕ್ಷ ಸಿ.ಎ. ಚನ್ನಪ್ಪ ಮಾತನಾಡಿ, ‘ವಿವಿಧ ಪಿಂಚಣಿ, ಮಾಸಾಶನ ಸಮರ್ಪಕವಾಗಿ ಬಾರದೆ ಫಲಾನುಭವಿಗಳು ಕನಿಷ್ಠ ಔಷಧೋಪಚಾರ, ನಿತ್ಯದ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ. ಕೂಡಲೇ ಬಾಕಿ ಪಿಂಚಣಿ, ಮಾಸಾಶನವನ್ನು ಅವರ ಖಾತೆಗಳಿಗೆ ಜಮೆ ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಗೊರ್ತಿ ಶ್ರೀನಿವಾಸಲು, ಚೇತನ್‌ಕುಮಾ‌ರ್, ಎಸ್‌. ಆರ್. ಕಾರ್ತಿಕ್, ಯಶ್ವಂತ್, ರಮೇಶ್, ಮಹೇಂದ್ರ, ತೇಜ, ರವಿಚಂದ್ರ, ಜಿ.ಬಿ. ಮಂಜುನಾಥ, ರವಿ ಮಡಿವಾಳ, ಎಂ. ರಾಜಶೇಖ‌ರ್, ಎಂ.ಕುಮಾರ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *