ಸಿಂಧನೂರು : ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಂಧನೂರು ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು, ಹಾಗೂ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಸಿಂಧನೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಓರಲ್ ಹೆಲ್ತ್ ಹಾಗೂ ದಂತ ಆರೋಗ್ಯ ಕಾರ್ಯಕ್ರಮದ ರಾಷ್ಟ್ರೀಯ ಕಿಶೋರ್ ಸ್ವಾಸ್ತ್ಯ ಕಾರ್ಯಕ್ರಮ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ಮತ್ತು ಉಚಿತ ದಂತ ತಪಾಸಣೆ ಶಿಬಿರ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಾಕ್ಟರ್ ನಾಗವೇಣಿ ದಂತ ವೈದ್ಯರು ಸಾರ್ವಜನಿಕ ಆಸ್ಪತ್ರೆ ಸಿಂಧನೂರ್ ಇವರು ವಿದ್ಯಾರ್ಥಿನಿಯನ್ನು ಉದ್ದೇಶಿಸಿ ದಂತ ಚಿಕಿತ್ಸೆಯು ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ದಂತ ಚಿಕಿತ್ಸೆಯ ಪ್ರಮುಖ ವಿಧಾನಗಳು ಮತ್ತು ದಂತ ತುಂಬುವಿಕೆನಲ್ ಚಿಕಿತ್ಸೆ , ಅಲ್ಲಿನ ಕಿರೀಟಗಳು ದಂತ ಹೊರ ತೆಗೆಯುವಿಕೆ ಹಲ್ಲುಗಳ ಕಾಳಜಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಒಳಭಾಗದ ಶಂಕು ಅಥವಾ ನೋವಿನ ದಂತ ಭರ್ತಿ ಚಿಕಿತ್ಸೆ ವಿವರಗಳು ತಿಳಿಸಿದರು ಅಲ್ಲಿನ ಅಂದವನ್ನು ಹೆಚ್ಚಿಸಲು ಕಾಸ್ಮೆಟಿಕ್ ದಂತ ಚಿಕಿತ್ಸೆ ಆಧುನಿಕ ವಿಧಾನಗಳು, ಹಲ್ಲುಗಳು ಕೊಳೆಯುವುದನ್ನು ತಡೆಯಲು ಮತ್ತು ವಸಡುಗಳ ರೋಗಗಳ ನಿಯಂತ್ರಿಸಲು ಮಿತವಾಗಿ ಚಿಕಿತ್ಸೆಯನ್ನು ಪಡೆಯಬೇಕು ಎಂದು ಹೇಳಿದರು ಹಲ್ಲಿನ ಸೋಂಕುಗಳ ಭಾಗದ ನರಗಳಿಗೆ ತಲುಪಿದಾಗ ಹಲ್ಲನ್ನು ಕಿತ್ತು ಹಾಕುವ ಬದಲು ಸಂಕಲ ವಿವರಿಸಿ ಹಲ್ಲನ್ನು ಉಳಿಸಿಕೊಳ್ಳಲು ಮಾಡುವ ಚಿಕಿತ್ಸೆ ಎಂದು ತಿಳಿಸಿದರು,ಈ ಕಾರ್ಯಕ್ರಮದಲ್ಲಿ ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಶ್ರೀಮತಿ ಗೀತಾ ಹಿರೇಮಠ ರವರು ವಿದ್ಯಾರ್ಥಿಗಳಿಗೆ ಮಾಸಿಕ ಋತುವು ಮಹಿಳೆಯರ ಒಂದು ಸ್ವಾಭಾವಿಕ ಪ್ರಕ್ರಿಯೆ, ಇದು ಜೀವದ ಉಸಿರಾಟದಷ್ಟೇ ಸಹಜ. ಮುಜುಗರ ಬೇಡ, ಶಿಕ್ಷಣ ಬೇಕು ಎಂದು ಹೇಳಿದರು. ಋತುಚಕ್ರದ ಮೂಡ ನಂಬಿಕೆಗಳಿಗೆ ವಿದ್ಯಾರ್ಥಿಗಳು ತಾರ್ಕಿಕವಾಗಿ ಚಿಂತಿಸಿ ಪರಿಹಾರ ಪಡೆಯಬೇಕು. ಇಲ್ಲಿ ಆರೋಗ್ಯ ಶಿಕ್ಷಣ ದಿಂದ ಎಲ್ಲಾ ಸಮಸ್ಯೆಗಳ ನಿವಾರಣೆಗಳು ಸಾಧ್ಯ. ನಂತರ ಬಾಲ್ಯವಿವಾಹಾರ ಪರಿಣಾಮಗಳ ಬಗ್ಗೆ, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಜಾಗೃತಿ ಶಿಕ್ಷಣ ನೀಡಿದರು. ಹಾಗೂ ಜನಸಂಖ್ಯ ದಿನಾಚರಣೆ ನಿಮಿತ್ಯ ಜನಸಂಖ್ಯ ನಿಯಂತ್ರಣ ವಿಷಯದ ಬಗ್ಗೆ, ಹಾಗೂ ನಿಯಂತ್ರಣ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಕಾರ್ಯಕ್ರಮದಲ್ಲಿ RKSK ಆಪ್ತ ಸಮಾಲೋಚಕರು ಶ್ರೀ ರಾಮಾಂಜನ ಕುಮಾರ್ ರವರು ಹದಿಹರೆಯ ಮಕ್ಕಳಿಗಾಗಿ ಇರುವಂತ ಸ್ನೇಹಾ ಕ್ಲಿನಿಕ್ ಕಾರ್ಯಕ್ರಮದ ಕುರಿತು ಅದರ ಸೇವಾ ಸೌಲಭ್ಯಗಳ ಕುರಿತು, ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆ ಗಳ ಋತುಚಕ್ರ ಗೊಂದಲಗಳಿಗೆ ಆಪ್ತ ಸಮಾಲೋಚನೆ ಮಾಡಿದರು. ಪ್ರೇರಣಾ- menstrual Cup ವಿತರಿಸಲಾಯಿತು. ಪೌಷ್ಟಿಕ ಆಹಾರ ಸೇವನೆ ಬಗ್ಗೆ, ವೈಯಕ್ತಿಕ ಶುಚಿತ್ವದ ಕುರಿತು ಮತ್ತು ಮಾನಸಿಕ ಆರೋಗ್ಯ ಸದೃಢತೆ ವಹಿಸಬೇಕು ಎಂದು ತಿಳಿಸಿದರು. ಡಾ. ವೈಜನಾಥ ಸಗರಮಠ್ ಉಪನ್ಯಾಸಕರು ಮಾತನಾಡಿ ಓರಲ್ ಹೆಲ್ತ್ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು ಆರೋಗ್ಯದ ಬಗ್ಗೆ ಕಾಳಸಿ ವಹಿಸಬೇಕು ವಯಕ್ತಿಕವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ನಂತರ ಪ್ರೊಫೆಸರ್ ಜಾಜಿ ದೇವೇಂದ್ರಪ್ಪ ಅವರು ಮಾತನಾಡಿ ಹೆಣ್ಣು ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆ ತುಂಬಾ ಮುಖ್ಯವಾಗಿರುತ್ತದೆ ಋತುಬಂಧ ದಿನಗಳಲ್ಲಿ ಮತ್ತು ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಕ್ಯಾನ್ಸರ್ ಅಂತ ಮಾರತ ರೋಗಗಳನ್ನು ಹಾಗೂ ದಂತ ಚಿಕಿತ್ಸೆಯ ಕುರಿತು ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು, ದಂತ ವೈದ್ಯರು, ಡಾ. ಪುಷ್ಪ, ದಿವ್ಯ,ರೇಣುಕಾ, ಇರ್ಶಾತ್ ಬೇಗಂ, ಕೀರ್ತನ್ ಸಂಧ್ಯಾ ಲಕ್ಷ್ಮಿ ದೇವಿ ಇತ್ಯಾದಿ ಉಪನ್ಯಾಸಕರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

