ಸಿಂಧನೂರು — ಕುಷ್ಟಗಿ ತಾಲೂಕಿನ ನಿಡಶೇಸಿ ಶ್ರೀ ಚನ್ನಬಸವೇಶ್ವರ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಷ. ಬ್ರ. ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಪಾದಸ್ಪರ್ಶ ಮಾಡಿ ಆಶ್ರಮದ ಎಲ್ಲಾ ಕೊಠಡಿಗಳನ್ನು ವೀಕ್ಷಿಸಿ ಆಶ್ರಮದ ಆಶ್ರಯದಾತರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬಿ ಆಶೀರ್ವದಿಸಿದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಆಶ್ರಮದ ಸೇವಾಕರ್ತ ದಂಪತಿಗಳಾದ ಸುಜಾತ ಡಾಕ್ಟರ್ ಚನ್ನಬಸವ ಸ್ವಾಮಿ ಹಿರೇಮಠ ದಂಪತಿಗಳು ಶ್ರೀಗಳಿಗೆ ವಿಶೇಷ ಪಾದಪೂಜೆ ಸಲ್ಲಿಸಿದರು. ನಂತರ ಷ. ಬ್ರ. ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕಾರುಣ್ಯಾಶ್ರಮದ ಸೇವೆ ಪುಣ್ಯದ ಕಾರ್ಯ ಇಂತಹ ಸೇವಾ ಕಾರ್ಯಗಳಿಗೆ ನಮ್ಮ ಶ್ರೀಮಠದ ಹಾಗೂ ನಾಡಿನ ಹರ ಗುರು ಚರಮೂರ್ತಿಗಳ ಶುಭಾ ಆಶೀರ್ವಾದ ಸದಾವಕಾಲವಿರುತ್ತದೆ. ನಮ್ಮ ಕಲ್ಯಾಣ ಕರ್ನಾಟಕದ ಸಮಾಜ ಸೇವೆಯ ಮಾದರಿ ಸಂಸ್ಥೆಯಾಗಿ ಮಾಡುತ್ತಿರುವ ಈ ಕಾರ್ಯ ವಿಶೇಷ ತಪಸ್ಸಾಗಿದೆ. ಕಾರುಣ್ಯ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿಕೊಟ್ಟು ನಾಡಿನ ಎಲ್ಲಾ ಕಾರುಣ್ಯ ಮೂರ್ತಿಗಳ ಆಶಯದಂತೆ ಈ ಸಂಸ್ಥೆ ಸಮಾಜಕ್ಕೆ ಅರ್ಪಣೆಯಾಗಿ ಸಿಂಧನೂರಿನ ಘನತೆ ಗೌರವವನ್ನು ಹೆಚ್ಚಿಸಿದೆ ಎಂದು ಆಶೀರ್ವಚನ ನೀಡಿ ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಅಮರೇಶ ಸ್ವಾಮಿ ಹಿರೇಮಠ ಬದಾಮಿ ಇವರನ್ನು ಆಶ್ರಮದ ವತಿಯಿಂದ ಗೌರವಿಸಲಾಯಿತು. ಈ ಸಮಯದಲ್ಲಿ ವೇದಮೂರ್ತಿ ವೀರೇಶ ಯಡಿಯೂರು ಮಠ ಶ್ರೀ ಶಾಂಭವಿ ಪುಣ್ಯಾಶ್ರಮ ಸಿಂಧನೂರು. ಮುದುಕಯ್ಯ ಸ್ವಾಮಿ ಯಡಿಯೂರು ಮಠ. ಶಿವಶರಣ ಸ್ವಾಮಿ. ಪ್ರಜ್ವಲ್ ಕುಮಾರ್ ಯಡಿಯೂರುಮಠ. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಆಶ್ರಮದ ಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸುಜಾತಾ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ.ಮರಿಯಪ್ಪ.ಜ್ಯೋತಿ. ಮತ್ತು ನಿಡಶೇಸಿ ಶ್ರೀಮಠದ ಸೇವಾಕರ್ತರುಗಳು ಉಪಸ್ಥಿತರಿದ್ದರು.

