ಸಿಂಧನೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಗ್ರಾಮೀಣ ಮಂಡಲ್ ಯುವ ಮೋರ್ಚ್ ಅಧ್ಯಕ್ಷರಾಗಿ ವಂಶಿಕೃಷ್ಣ ನೆಕ್ಕಂಟಿ ಗೊರೇಬಾಳ ಕ್ಯಾಂಪ್ ಇವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ ಎಂದು ಗ್ರಾಮೀಣ ಮಂಡಲ ತಾಲೂಕು ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಳ್ ತಿಳಿಸಿದ್ದಾರೆ.
ನೂತನವಾಗಿ ನೇಮಕವಾದ ಗ್ರಾಮೀಣ ಮಂಡಲದ ಯುವ ಮೋರ್ಚ್ ಅಧ್ಯಕ್ಷ ವಂಶಿಕೃಷ್ಣ ನೆಕ್ಕಂಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ಪ್ರಾಮಾಣಿಕವಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಪಕ್ಷ ನನ್ನನ್ನು ಗುರುತಿಸಿ ಈ ಸ್ಥಾನ ನೀಡಿದೆ. ಇನ್ನೂ ಮುಂದೆ ಹೆಚ್ಚಿನ ಜವಾಬ್ದಾರಿ ನೀಡಿದೆ. ಮುಂದಿನ ದಿನಗಳಲ್ಲಿ ಯುವಪಡೆಯೊಂದಿಗೆ ಪಕ್ಷ ಕಟ್ಟಲು ನನ್ನ ಶಕ್ತಿ ಮೀರಿ ಕೆಲಸ ಮಾಡುವೆ, 2028 ರ ಚುನಾವಣೆ ವೇಳೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಕೆಲಸ ಮಾಡಿ ತಾಲೂಕಿನಲ್ಲಿ ಕಮಲ ಹರಳುವಂತೆ ಹಗಲಿರುಳು ಶ್ರಮವಹಿಸಿ ಕೆಲಸ ಮಾಡುವೆ.
ಗ್ರಾಮೂಣ ಮಂಡಲ ಯುವ ಮೋರ್ಚ್ ಅಧ್ಯಕ್ಷನಾಗಿ ನೇಮಕ ಮಾಡಲು ಸಹಕರಿಸಿದ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು. ಈ ವೇಳೆ: ನಗರಸಭೆ ಮಾಜಿ ಸದಸ್ಯರಾದ ರಾಜಶೇಖರ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪೂರು, ಯುವ ಮೋರ್ಚ್ ನಗರ ಘಟಕದ ಅಧ್ಯಕ್ಷ ಮುತ್ತುಬರ್ಸಿ, ಸೋಮನಾಥ ಕಲ್ಲೂರು, ಮಲ್ಲಿಕಾರ್ಜುನ ಕುನ್ನಟಗಿ, ರವಿಕುಮಾರ ಮಾಸ್ತಾನ ಕ್ಯಾಂಪ್, ಸಿದ್ದಪ್ಪ, ಸುನೀಲಕುಮಾರ ನಾಯಕ ಸೇರಿದಂತೆ ಅನೇಕರಿದ್ದರು.

