ಸಿಂಧನೂರು ಜು.7 ಜು.7ರಂದು ಗೋಡಿತಿ ನಾಗೇಶ್ವರನಾಥ್ ಚಾರಿಟೇಬಲ್ ಟ್ರಸ್ಟ್ ಸಿಂಧನೂರು ವತಿಯಿಂದ ಮುಳ್ಳೂರು ಕ್ಯಾಂಪಿನ ಸರಕಾರಿ ಶಾಲೆಯಲ್ಲಿ ವಿಶ್ವನಾಥ್ ಚೌದ್ರಿ ಅವರ ಮಗ ದಿವಂಗತ ನಾಗೇಶ್ವರ ನಾಥ್ ಚೌಧರಿ ಪುಣ್ಯ ಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು.
ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಮಾತನಾಡಿ, ಗೋಡೆತಿ ವಿಶ್ವನಾಥ್ ಅವರ ಮಗನ ನೆನಪಿಗಾಗಿ ಈ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು. ಶಾಲೆಯ ಮೂಲಭೂತ ಸೌಕರ್ಯಗಳನ್ನು ಪೂರೈಸುವ ಮೂಲಕ ಶಾಲೆಯ ಅಭಿವೃದ್ಧಿಗೆ ಅತ್ಯುತ್ತಮ ಮಾನವೀಯ ಕೆಲಸವನ್ನು ಮಾಡಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿವೆ.
ಸರ್ಕಾರದ ನಿರ್ಲಕ್ಷ್ಯ ಹಾಗೂ ಪಾಲಕರಲ್ಲಿರುವ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದಾಗಿ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಸುಮಾರು 50% ನಷ್ಟು ಶಿಕ್ಷಕರ ಕೊರತೆಯಿದೆ. ಭಾರಿ ಸಂಖ್ಯೆಯ ಶಾಲೆಗಳು ಕೇವಲ ಒಬ್ಬರೇ ಶಿಕ್ಷಕರಿಂದ ನಡೆಯುತ್ತಿದ್ದು, ಅತಿಥಿ ಶಿಕ್ಷಕರ ಮೇಲೆ ಶಿಕ್ಷಣ ಸಂಸ್ಥೆಗಳು ಅವಲಂಬಿತವಾಗಿವೆ. ಇಂಗ್ಲಿಷ್ ಶಿಕ್ಷಣದ ಅಗತ್ಯತೆ
ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಕಲಿಸಬೇಕು ಎಂಬ ಆದೇಶವಿದ್ದರೂ, ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಿರುವ ಅರ್ಹ ಶಿಕ್ಷಕರು ಇಂಗ್ಲಿಷ್ ಭಾಷೆಯನ್ನು ಕಲಿಸಿದರೆ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ.
ಬಡ ಕುಟುಂಬಗಳ ಮಕ್ಕಳು ಇಂದಿಗೂ ಅನಿವಾರ್ಯವಾಗಿ ಸರ್ಕಾರಿ ಶಾಲೆಗಳನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ಈ ಶಾಲೆಗಳು ಜೀವಂತವಾಗಿ ಉಳಿಯಬೇಕಾದರೆ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾಗೃತರಾಗಬೇಕು ಮತ್ತು ಶಾಲಾ ಸುಧಾರಣಾ ಸಮಿತಿಗಳು ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ: ಮುಖಂಡರಾದ ಬಿ.ಹರ್ಷ, ವಿಶ್ವನಾಥ ಚೌದ್ರಿ, ದೇವರಾಜ ಪಾಟೀಲ್, ಸುರೇಶ ನೆಕ್ಕಂಟಿ, ವಂಶಿಕೃಷ್ಣ, ಬಸವರಾಜ ಸಾಲಗುಂದಾ, ಅಮರೇಗೌಡ ಮಲ್ಲಾಪುರ, ಅಜಯ್ ದಾಸರಿ, ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು, ಮುಖ್ಯ ಗುರು ಆದಪ್ಪ ಸಾಬಣ್ಣ ವಗ್ಗರ್, ಅಕ್ಷರ ದಾಸೋಹ ಅಧಿಕಾರಿಗಳು, ನಾಗಪ್ಪ ಸಿಆರ್.ಪಿ, ಷಣ್ಮುಖಗೌಡ ಸಿ.ಆರ್.ಪಿ, ಶೇಷರಾವ್ ಮುಳ್ಳೂರು ಕ್ಯಾಂಪ್, ಅಮರೇಶಗೌಡ ಗ್ರಾಮ ಪಂಚಾಯತಿ ಸದಸ್ಯರು, ಆದೇಶ ಶಾಲೆಯ ಮುಖ್ಯ ಗುರುಗಳು, ಉಪಸ್ಥಿತರಿದ್ದರು.

