ತಾಳಿಕೋಟಿ: ಹಸಿರು ಕ್ರಾಂತಿಯ ಹರಿಕಾರ, ದೇಶ ಕಂಡ ಶ್ರೇಷ್ಠ ನಾಯಕ, ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು.ತಹಶೀಲ್ದಾರ ಡಾ.ವಿನಯಾ ಹೂಗಾರ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಯಮನಪ್ಪ ಕಟ್ಟಿಮನಿ ಅವರು ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಮಹಾನಾಯಕನಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ತಮ್ಮ ನುಡಿ ನಮನಗಳಲ್ಲಿ ಭಾರತದ ಮಾಜಿ ಉಪ ಪ್ರಧಾನಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರಾದ ಡಾ.ಬಾಬು ಜಗಜೀನ್ ರಾಮ್ ಅವರು ಬಿಟ್ಟುಹೋದ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಲ್ಲಪ್ಪ ಶಿರೋಳ, ಪರಶುರಾಮ ಹೋಟಗಾರ, ದ್ಯಾಮಣ್ಣ ಸೋಮನಾಳ, ಬಸ್ಸು ಕಟ್ಟಿಮನಿ, ರಮೇಶ್ ಮಾದರ, ಕಾಶಿನಾಥ ಕಟ್ಟಿಮನಿ, ರಮೇಶ್ ದೋಡಮನಿ, ಹುಲಗಪ್ಪ ಕಟ್ಟಿಮನಿ, ಆಸೀಫ್ ಕೆಂಭಾವಿ, ಮಡು ಚಲವಾದಿ, ಗೋಪಾಲ ಕಟ್ಟಿಮನಿ, ಶೇಖಪ್ಪ ಕಾರಗಾನೂರ ಹಾಗೂ ತಹಶೀಲ್ದಾರರ ಕಚೇರಿ ಸಿಬ್ಬಂದಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *