ಕವಿತಾಳ -: ‘ದೇಶದ ಹೆಮ್ಮೆಯ ಅಶೋಕ ಲಾಂಛನ ಪ್ರತಿಮೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಕಾಳಪ್ಪ ಪತ್ತಾರ ಅವರ ಕಾರ್ಯ ಶ್ಲಾಘನೀಯ’ ಎಂದು ಎಸ್ ಐ ಗುರುಚಂದ್ರ ಯಾದವ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಎದುರು ರಸ್ತೆ ವಿಭಜಕದಲ್ಲಿ ಕಾಳಪ್ಪ ಅವರು ನಿರ್ಮಿಸಿದ ಅಶೋಕ ಲಾಂಛನ ಪ್ರತಿಮೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಬೃಹತ್ ಗಾತ್ರದ ಕನ್ನಡಾಂಬೆ ಮೂರ್ತಿಯನ್ನು ಶಾಲೆಗೆ ದೇಣಿಗೆ ನೀಡಿರುವ ಅವರ ನಡೆ ಮಾದರಿಯಾಗಿದೆ’ ಎಂದರು. ಈ ಸಂದರ್ಭದಲ್ಲಿ ಕಲೆಗಾರರಾದ ಕಾಳಪ್ಪ ಪತ್ತಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಎಸ್‌ಐ ಹೇಮಂತ, ಹೆಡ್ ಕಾನ್ಸ್ಟೇಬಲ್ ರಾಜ್ ಮಹಮದ್ ಹಾಗೂ ಪೊಲೀಸ್ ಸಿಬ್ಬಂದಿ, ಮುಖಂಡರಾದ ತಿಪ್ಪಯ್ಯ ಸ್ವಾಮಿ, ಮಾನಸಿಂಗ್, ಅಯ್ಯಪ್ಪ ಕಂಬಾರ, ಮಾನಪ್ಪ ಉಪ್ಪಳ, ಅಮರಗುಂಡಪ್ಪ, ರಮೇಶ ಬಡಿಗೇರ, ಮೌನೇಶ ಪತ್ತಾರ, ಶ್ರೀಧರ ಬಡಿಗೇರ, ಈಶಪ್ಪ ಚಿಕ್ಕದಿನ್ನಿ, ಶ್ರೀಶೈಲಪ್ಪ ಬಡಿಗೇರ, ಈರಣ್ಣ, ರಮೇಶ ಮಡಿವಾಳ, ರಫಿ ಒಂಟಿಬಂಡಿ ಮತ್ತಿತರರು ಉಪಸ್ಥಿತರಿದ್ದರು.

