ಸಿಂಧನೂರು – ಹಂಪನಗೌಡ ಬಾದರ್ಲಿ ಅಭಿಮಾನಿ ಬಳಗ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ) ಅಧ್ಯಕ್ಷರಾದ ವೆಂಕನಗೌಡ (ಬಾಬುಗೌಡ) ಬಾದರ್ಲಿ ಇವರ ನೇತೃತ್ವದಲ್ಲಿ ಹಂಪನಗೌಡ ಬಾದರ್ಲಿ ಅವರಿಗೆ ಡಿ. ಕೆ. ಶಿವಕುಮಾರ ಸಂಪುಟದಲ್ಲಿ ಸಚವ ದೊರೆಯಲಿ ಎನ್ನುವ ವಿಶೇಷ ಸಂಕಲ್ಪದೊಂದಿಗೆ ಆಶ್ರಮದಲ್ಲಿ ವಿವಿಧ ಬಗೆಯ ಮಹಾಪ್ರಸಾದ ಸೇವೆಯನ್ನು ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ಸಿಂಧನೂರಿನ ಜನಪ್ರಿಯ ಶಾಸಕರು ಹಿರಿಯ ಅನುಭವಿ ರಾಜಕಾರಣಿಗಳು ಹಾಗೂ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಹಂಪನಗೌಡ ಬಾದರ್ಲಿಯವರಿಗೆ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಬೇಕೆಂಬುದು ಸಿಂಧನೂರಿನ ಜನತೆಯ ಆಶಯವಾಗಿದೆ. ಅವರ ನಿರಂತರ ಜನ ಪರ ಕಾರ್ಯಗಳು ಮತ್ತು ತಾಲೂಕಿನ ಅಭಿವೃದ್ಧಿ ಮತ್ತು ರೈತರ ಕಾಳಜಿಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಹಿರಿಯ ಶಾಸಕರಾಗಿ ಎ.ಐ.ಸಿ.ಸಿ. ಯ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಕ್ತರಾಗಿ ಅವರ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ನಮ್ಮ ಶಾಸಕರು ಸಚಿವರಾದರೆ ನಮ್ಮ ಸಿಂಧನೂರು ತಾಲೂಕು ಸಮಗ್ರ ಅಭಿವೃದ್ಧಿಯಾಗುತ್ತದೆ. ಮತ್ತು ನಮ್ಮ ಕಾರುಣ್ಯ ಆಶ್ರಮಕ್ಕೆ ಸ್ವಂತ ಜಾಗ ಹಾಗೂ ಅನುದಾನ ದೊರೆಯಬಹುದು ಎನ್ನುವುದು ನಮ್ಮ ಸಂಸ್ಥೆಯ ಆಶಯವಾಗಿದೆ. ಇಂದಿನ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕೂಡ ಸಕಲ ದೇವಾನುದೇವತೆಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುವುದರ ಮೂಲಕ ಹಂಪನಗೌಡ ಬಾದರ್ಲಿ ಅವರಿಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟಿದಲ್ಲಿ ಸಚಿವ ಸ್ಥಾನ ದೊರೆಯಲಿ ಎನ್ನುವ ವಿಶೇಷ ಪ್ರಾರ್ಥನೆಯೊಂದಿಗೆ ಹಂಪನಗೌಡ ಬಾದರ್ಲಿ ಅವರಿಗೂ ಮತ್ತು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅಂತರಾಳದ ಮೂಲಕ ಆಶೀರ್ವದಿಸುತ್ತಿದ್ದೇನೆ ಎಂದು ಮಾತನಾಡಿ. ಹಂಪನಗೌಡ ಬಾದರ್ಲಿ ಅವರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸುಡಾ ಅಧ್ಯಕ್ಷರಾದ ಬಾಬುಗೌಡ ಬಾದರ್ಲಿ ಅವರು ನಾವು ಹಾಗೂ ನಮ್ಮ ಕುಟುಂಬ ಮತ್ತು ನಮ್ಮೆಲ್ಲಾ ಕಾರ್ಯಕರ್ತರುಗಳು ಪ್ರಾಮಾಣಿಕ ಸಂಸ್ಥೆಯಾದ ನಮ್ಮ ಊರಿನ ಕಾರುಣ್ಯ ಆಶ್ರಮಕ್ಕೆ ಯಾವಾಗಲೂ ಜೊತೆಗಿರುತ್ತೇವೆ. ಹಂಪನಗೌಡ ಬಾದರ್ಲಿ ಅವರು ಸಚಿವರಾದರೆ ಆಶ್ರಮಕ್ಕೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುತ್ತೇವೆ. ಆಶ್ರಮದ ಪ್ರತಿಯೊಬ್ಬ ಆಶ್ರಯದಾತರುಗಳ ಆಶೀರ್ವಾದ ನಮ್ಮ ಶಾಸಕರ ಮೇಲಿರಲಿ ಸಮಾಜದ ಒಳಿತಿಗಾಗಿ ನಮ್ಮ ಕುಟುಂಬ ನಿರಂತರ ಜೊತೆಗಿರುತ್ತದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಮಯದಲ್ಲಿ ಆಶ್ರಮದ ಸದಸ್ಯರಾದ ಸುಜಾತ ಹಿರೇಮಠ. ಮೇಲ್ವಿಚಾರಕರಾದ ಹನುಮಂತಪ್ಪ ನಿವೃತ್ತ ಎ. ಎಸ್. ಐ. ಮಸ್ಕಿಮತ್ತು ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ ಹಾಗೂ ಹಂಪನಗೌಡ ಬಾದರ್ಲಿ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು

