ತಾಲೂಕಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ,ಅಲ್ಪಸಂಖ್ಯಾತರ ವರ್ಗಗಳ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಮತ್ತು ಈ ಎಲ್ಲಾ ವರ್ಗಗಳ ವಸತಿ ನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರ ಮತ್ತು ಸಹಾಯಕರ ಕುಂದು ಕೊರೆತಗಳ ಸಭೆಯನ್ನು ತಾಲೂಕ ಪಂಚಾಯತ್ ಸಭಾಂಗಣದಲ್ಲಿ
ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು .

ವಸತಿ ನಿಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಾಕಿ ವೇತನದ, ಸಿಬ್ಬಂದಿಗಳಿಗೆ ESI & EPF , ಸಮವಸ್ತ್ರ, ID ಕಾರ್ಡ, ಸೂಕ್ಷ್ಮ ಪರಿಕರ, ಮತ್ತು ಸರಕಾರದಿಂದ ಅಧಿಸೂಚನೆಯಂತೆ ಕನಿಷ್ಠ ಕೂಲಿ ಪಾವತಿಸುವ ಕುರಿತು ಹಾಗೂ ಗುತ್ತಿಗೆದಾರರು ತಾವು ಪಡೆದ ನೊಂದಾಣಿಯಂತೆ ಸಿಬ್ಬಂದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ನೀಡುವ ಕುರಿತು ಸಭೆಯಲ್ಲಿ ಪ್ರತಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು . ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿಗಳು ಮತ್ತು ವಿವಿಧ ವಸತಿ ನಿಲಯ ಅಧಿಕಾರಿಗಳು ಮತ್ತು ವಸತಿ ನಿಲಯದ ಸಿಬ್ಬಂದಿಗಳು ಹಾಗೂ ಅಸಂಘಟಿತ ಕಾರ್ಮಿಕರ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *