ಕಂಪ್ಲಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಂಪ್ಲಿ ನಗರ ಘಟಕದ ನೂತನ ಅಧ್ಯಕ್ಷರಾಗಿ ವಾಲ್ಮೀಕಿ ಈರಣ್ಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಪಟ್ಟಣದ ಎಸ್‌ಎನ್‌ಪೇಟೆಯ ಶಿರಿಡಿ ಸಾಯಿಬಾಬಾ ದೇವಸ್ಥಾನ ಬಳಿಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸಮಾಜದ ಸಂಘಟನಾ ಸಭೆಯಲ್ಲಿ ಸಮುದಾಯದವರು ಒಮ್ಮತದೊಂದಿಗೆ ನಗರ ಘಟಕದ ಅಧ್ಯಕ್ಷರನ್ನಾಗಿ ವಾಲ್ಮೀಕಿ ಈರಣ್ಣ ಇವರನ್ನು ಆಯ್ಕೆ ಮಾಡಿದರು.
ನಂತರ ಮಾಲಾರ್ಪಣೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನರ‍್ಗಂಟಿ ವಿರೇಶ, ಮುಖಂಡರಾದ ಬಿ.ನಾರಾಯಣಪ್ಪ, ಮರಿಯಪ್ಪ, ಬಿ.ಲಕ್ಷ್ಮಣ, ದುರುಗಪ್ಪ, ಬಸವರಾಜ, ಜೆ.ನಾಗರಾಜ, ಪೈಲ್ವಾನ್ ವಿರೇಶ, ಟ್ಯಾಕ್ಸಿ ಈರಣ್ಣ, ವೆಂಕಟೇಶ, ಗೋವಿಂದಪ್ಪ, ಎಂ.ಬಸಪ್ಪ, ಮರಿಲಿಂಗಪ್ಪ, ದೊಡ್ಡಬಸಪ್ಪ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *