ಸಿಂಧನೂರು ಜೂನ್ – 15* ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಇಂದಿರಾ ನಗರದ ನಟರಾಜ ಕಾಲೋನಿಯಲ್ಲಿ ಇರುವ ಶ್ರೀ ರಾಜೇಂದ್ರ ಮೆಮೋರಿಯಲ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ಮಾಸಚಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಯಿತು ಘೋಷಣೆ: “ಮಲೇರಿಯ ಅಂತ್ಯಗೊಳಿಸೋಣ ಸಂಕಲ್ಪ ಮಾಡೋಣ ನಮಗಿದು ಸಾಧ್ಯವಿದೆ ನಾವು ಇದನ್ನು ಮಾಡೋಣ ” ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ಹಿರೇಮಠ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಇವರು ಮಾತನಾಡಿ ಮಲೇರಿಯಾ ಅಂತ್ಯಗೊಳಿಸಲು ಸಂಕಲ್ಪ ಮಾಡೋಣ ನಮಗಿದು ಸಾಧ್ಯವಿದೆ ನಾವು ಇದನ್ನು ಮಾಡೋಣ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಲಾಯಿತು . ಮಳೆಗಾಲ ಪ್ರಾರಂಭದವಾದುದರಿಂದ ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಶಾಲಾ ಮಕ್ಕಳೊಂದಿಗೆ ಮಲೇರಿಯಾ ಕುರಿತು ಜಾಗೃತಿ ಜಾತಾ ಮಾಡಿಸಲಾಯಿತು ಮಲೇರಿಯಾ ರೋಗವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ ಹರಡುತ್ತದೆ ಪ್ಲಾಸ್ಮೊಡಿಯಂ ಎಂಬ ಪರಾವಲಂಬಿಯಿಂದ ಉಂಟಾಗುತ್ತದೆ ಮಳೆಗಾಲ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಈ ರೋಗದ ಹರಡುವಿಕೆ ಹೆಚ್ಚಾಗಿರುತ್ತದೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಜೀವಕ್ಕೆ ಅಪಾಯಕಾರಿ ಹರಡುತದೆ ಕುರಿತು ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಕೆಲವು ಅತ್ಯಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಆರೋಗ್ಯ ರಕ್ಷಣೆ ಕಲುಷಿತ ನೀರು ಮತ್ತು ಸೊಳ್ಳೆಗಳಿಂದ ಹರಡುವ ಡೇಂಗಿ ಮಲೇರಿಯ ಟೈಪಾಡ್ ಮತ್ತು ಕಾಮಾಲೆ ಕಾಯಿಲೆಗಳ ಬಗ್ಗೆ ಎಚ್ಚರವಿರಬೇಕು ಮತ್ತು ಮನೆಯ ಸುತ್ತಮುತ್ತಲಿನ ಪರಿಸರವನ್ನು ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳಿ ಇದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು, ಎಲ್ಲಾ ಶಾಲೆಗಳಲ್ಲಿ ಲಾರ್ವ ಮುಕ್ತ ಆವರಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಜವಾಬ್ದಾರಿಯಾಗಿದೆ ಯಾವುದೇ ಜ್ವರ ಬಂದರು ರಕ್ತಪರೀಕ್ಷೆಯನ್ನು ತಕ್ಷಣವೇ ಮಾಡಿಸಿಕೊಳ್ಳಬೇಕು ಸಮೀಪದ ಆರೋಗ್ಯ ಕೇಂದ್ರಗಳನ್ನ ಸಂಪರ್ಕಿಸಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಆರೋಗ್ಯದಲ್ಲಿ ಏರುಪೇರು ಆದಾಗ ನಿರ್ಲಕ್ಷ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಈ ಸಂದರ್ಭದಲ್ಲಿ ಶ್ರೀ ಹನುಮಂತ HIO, ಶ್ರೀಮತಿ ಶಮಿನಬೇಗಂ PHCO, ಶ್ರೀ ಶಿವರಾಜ್ ಮುಖ್ಯೋಪಾಧ್ಯಾಯರು, ಶ್ರೀ ಸತೀಶ್, ಶ್ರೀಮತಿ ಲಷ್ಮಿ, ಶ್ರೀಮತಿ ಹುಲಿಗೆಮ್ಮ, ಶಾಲಾ ಸಹಶಿಕ್ಷಕರು , ಬಾನುಬೇಗಂ, ಸೈನಜ, ಮೇರುನಿಸಾ, ವಿಜಯಲಷ್ಮಿ,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *