” ಹಂಪನಗೌಡ.ಬಾದರ್ಲಿ ಅಭಿಮಾನಿಗಳ ಬಳಗ” ದ ವತಿಯಿಂದ ನಿನ್ನೆಯ ದಿನ ಅಂದರೆ, 12/06/2026 ಶುಕ್ರವಾರದಂದು, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ಶಾಸಕರಾದ ಮಾನ್ಯ ಶ್ರೀ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ದೊರಕಲಿ ಎಂದು, ಸಿಂಧನೂರಿನ ಗಣೇಶ ಗುಡಿಯಿಂದ, ಅಂಬಾಮಠದ(ಸಿದ್ಧ ಪರ್ವತದ) ಶಕ್ತಿ ದೇವತೆಯಾದ ಅಂಬಾ ದೇವಿಯ ದರ್ಶನ ಪಡೆಯಲು ಹಾಗೂ ಅಂಬಾದೇವಿ ದೇವಸ್ಥಾನದಲ್ಲಿ ಸಾವಿರದ ಎಂಟು ತೆಂಗಿನಕಾಯಿ ಹೊಡೆಯುವ ಮುಖಾಂತರ ಹರಕೆಯನ್ನು ತೀರಿಸಲು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಂಬಾಮಠಕ್ಕೆ ಆಗಮಿಸಿದ ಹಾಗೂ ಈ ಪಾದಯಾತ್ರೆಗೆ ಎಲ್ಲಾ ರೀತಿಯಿಂದಲೂ ಸಹಾಯ ಮತ್ತು ಸಹಕಾರ ನೀಡಿರುವ ತಮಗೆ, ವೈಯಕ್ತಿಕವಾಗಿ ಹಾಗೂ “ಹಂಪನಗೌಡ ಬಾದರ್ಲಿ ಅಭಿಮಾನಿ ಬಳಗ” ದ ವತಿಯಿಂದ, ಹೃತ್ಪೂರ್ವಕ ಕೃತಜ್ಞತೆಗಳು.

ಹಂಪನಗೌಡ ಬಾದರ್ಲಿ , ಶಾಸಕರು ಸಿಂಧನೂರು ವಿಧಾನ ಸಭಾ ಕ್ಷೇತ್ರ

ಬಾಬಾಗೌಡ ಬಾದರ್ಲಿ , ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಸಿಂಧನೂರು
