ಬಳ್ಳಾರಿ / ಕಂಪ್ಲಿ: ಪಟ್ಟಣದ ಅತಿಥಿ ಗೃಹದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಬುದ್ಧ, ಬಸವ, ಅಂಬೇಡ್ಕರ್ ವಾದ)ಯ ತಾಲೂಕು ಮತ್ತು ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಶುಕ್ರವಾರ ಆಯ್ಕೆ ಮಾಡಲಾಯಿತು. ಇಲ್ಲಿನ ಸಂಘಟನಾ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕರಡಿ ವಲಿಸಾಬ್ ಮಾರ್ಗದರ್ಶನದಲ್ಲಿ ತಾಲೂಕು ಅಧ್ಯಕ್ಷ ಸಿ.ಬಸವರಾಜ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದರು. ತಾಲೂಕು ಉಪಾಧ್ಯಕ್ಷರಾಗಿ ಮೆಟ್ರಿ ಸೋಮಪ್ಪ ಮತ್ತು ತಾಲೂಕು ಯುವ ಘಟಕ ಅಧ್ಯಕ್ಷರಾಗಿ ಕೆ.ಜಾಫರ್ ಇವರನ್ನು ಆಯ್ಕೆ ಮಾಡಿ, ಆದೇಶ ಪ್ರತಿ ನೀಡಿ, ಸನ್ಮಾನಿಸಿ ಅಭಿನಂದಿಸಿದರು. ನಂತರ ಜಿಲ್ಲಾ ಉಪಾಧ್ಯಕ್ಷ ಕರಡಿ ವಲಿಸಾಬ್ ಮಾತನಾಡಿ, ತಾಲೂಕು ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲ ಪಡಿಸುವ ಸಲುವಾಗಿ ರಾಜ್ಯಾದ್ಯಂತ ಘಟಕಗಳನ್ನು ತೆರೆದಿದ್ದು, ಜನ ಪರ ಚಳುವಳಿಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಬರುತ್ತಿರುವ ತಮ್ಮ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಯಿತು. ತಾಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸಲು ಜಿಲ್ಲಾ ಸಮಿತಿಯೊಂದಿಗೆ ಸಹಕರಿಸಬೇಕೆಂದು, ತಮ್ಮ ಹೋರಾಟ ಮುಂಚೂಣಿಯಲ್ಲಿ ಮಾಡಲು ಜಿಲ್ಲಾ ಸಮಿತಿಯೊಂದಿಗೆ ಸಹಕರಿಸುತ್ತಾ ಅಖಿಲ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಂಘಟನೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಜನಪರ ಚಳುವಳಿಗಳನ್ನು ರೂಪಿಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಚಂದ್ರಶೇಖರ, ಖಜಾಂಚಿ ಗಂಗಾಧರ, ಮುಖಂಡರಾದ ಸಣ್ಣ ಹುಲುಗಪ್ಪ, ಅಂಜಿನಪ್ಪ, ರುದ್ರಪ್ಪ, ರಫೀಕ್, ಪಕ್ಕೀರಪ್ಪ, ಮಾರೆಪ್ಪ, ಅನ್ವರ್‌ಸಾಬ್, ಕೆ.ಲಕ್ಷ್ಮಣ, ಬಾಲಪ್ಪ, ಯಲ್ಲಪ್ಪ ಇದ್ದರು.

Leave a Reply

Your email address will not be published. Required fields are marked *