ರಾಯಚೂರು ತಾಲೂಕಿನ ಹುಣಿಸಿಹಾಳ ಹುಡಾ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ವಿಶ್ವಪರಿಸರ ದಿನಾಚರಣೆ ಹಮ್ಮಿಕೊಳ್ಳುವ ಮೂಲಕ 50 ಸಸಿಗಳನ್ನು ನೆಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಸೌಭಾಗ್ಯವತಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನ ಕಾಪಾಡುತ್ತದೆ. ವನಸಿರಿ ಪೌಂಡೇಷನ್ ತಂಡದವರು ನಮ್ಮ ಶಾಲೆಯಲ್ಲಿ 50 ಸಸಿಗಳನ್ನು ನೆಡಲು ಮುಂದಾಗಿದ್ದಾರೆ ಇದು ಒಂದು ಒಳ್ಳೆಯ ಕಾರ್ಯ.ಮಕ್ಕಳಲ್ಲಿ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.ನಮ್ಮ ಶಾಲೆಯ ವತಿಯಿಂದ ವಿದ್ಯಾರ್ಥಿಗಳ ಮೂಲಕ ಈ ಸಸಿಗಳನ್ನು ಉಳುಸಿ ಬೆಳಸಲು ಮುಂದಾಗುತ್ತೇವೆ ಎಂದು ನಾವು ಅವರಿಗೆ ತಿಳಿಸಲು ಇಚ್ಛೆಸುತ್ತೇವೆ. ಸಸಿಗಳನ್ನು ನೀಡಿದರು ವನಸಿರಿ ಪೌಂಡೇಷನ್ ತಂಡಕ್ಕೆ ಧನ್ಯವಾದಗಳು ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಪರಿಸರ ಜಾಗೃತಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸುತ್ತೇನೆ.
ಈ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ರಾಜ್ಯ ಸಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ. ಹೊಸಹಳ್ಳಿ,ಮಸ್ಕಿ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರ ಪರಿಸರ ಪ್ರೇಮಿ ಶ್ರೀಧರ ವಿಶ್ವಕರ್ಮ,ಮುಖ್ಯ ಶಿಕ್ಷಕಿ ಶ್ರೀಮತಿ ಸಂಗೀತಾ,ಶಿಕ್ಷಕ ವರ್ಗದವರಾದ ಪ್ರದೀಪ್ ಕುಮಾರ, ಶ್ರೀಮತಿ ಪಾರ್ವತಿ,ಶ್ರೀಮತಿ ಸುರೇಖಾ, ಶ್ರೀಮತಿ ಚಂದ್ರಕಲಾ,ಕು.ರಾಖಿಭಾಯಿ, ತ್ರಿವೇಣಿ, ಶ್ರೀಮತಿ ರೇಣುಕಾ, ಅನಿತಾ,ಶೃತಿ,ರೇಣುಕಾ ಹಾಗೂ ವಿದ್ಯಾರ್ಥಿಗಳು ಇದ್ದರು.

