ಮಸ್ಕಿ ತಾಲ್ಲೂಕ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಮ್ ರಾಮಲದಿನ್ನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ವರ್ಷ ಆರಂಭವಾಗಿ ಹನ್ನೆರಡು ದಿನಕಳೆದರೂ ಶಾಲೆಗೆ ಮಕ್ಕಳನ್ನು ಪಾಲಕರು ಕಳಿಸುತ್ತಿಲ್ಲ,ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 17 ಇದ್ದು, ಕಾರಣ ಶಾಲೆಯಲ್ಲಿ ಬಿಸಿಯುಟ ಮಾಡುವ ಶಂಕ್ರಮ್ಮ ಎನ್ನುವ ಅಡುಗೆ ಸಹಾಯಕಿಯನ್ನು ಶಾಲೆಯಿಂದ ಬಿಡಸಬೇಕು. ಏಕೆಂದರೆ ಗ್ರಾಮಸ್ಥರು ಮತ್ತು ಅಡುಗೆ ಸಹಾಯಕಿ ಶಂಕ್ರಮ್ಮ ಕುಟುಂಬದ ಮದ್ಯೆ ಕೆಲ ದಿನಗಳ ಹಿಂದೆ ವೈಯಕ್ತಿಕ ಜಗಳ ಕಾರಣದಿಂದಾಗಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಏನಾದರೂ ನಮ್ಮ ಮಕ್ಕಳ ಮೇಲೆ ಅನಾಹುತ ಆದರೆ ಯಾರು ಹೊಣೆ ಎಂಬುದು ಪಾಲಕರ ವಾದ, ಶಾಲೆ ಆರಂಭವಾಗಿ ಇಷ್ಟು ದಿನಗಳಾದರೂ ಮಕ್ಕಳನ್ನು ಪಾಲಕರು ಕಳಿಸಿಲ್ಲ,ಮುಂದೆ ಕೂಡ ಕಳಸಲ್ಲ ಎಂದು ಪಾಲಕರು ಗಟ್ಟಿ ನಿರ್ಧಾರ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ರಾಮ ರಾಮ ಎಂಬಂತೆ ಇದೆ ರಾಮಲದಿನ್ನಿ ಶಾಲೆ ಕಥೆ,ಎನು ಅರಿಯದ ಹಸುಗೂಸು ಕಂದಮಗಳು ಶಾಲೆಬಿಟ್ಟು ಊರಲ್ಲೆ ಅಲ್ಲಿ ಇಲ್ಲಿ ಆಟ ಆಡುತ್ತಾ ಶಾಲೆಯಿಂದ ದೂರ ಉಳಿದಿದ್ದು.ಇಂದು ಶಾಲೆಗೆ ಮಾನ್ವಿ ಬಿಇಒ ಅವರ ಆದೇಶದಂತೆ ಸಮಸ್ಯೆ ಬಗೆಹರಿಸಲು ಪ್ರೌಢಶಾಲಾ ಮುಖ್ಯಗುರು ಸುಭಾಷ್ ಸಿಂಗ್ ಆಗಮಿಸಿ ಪಾಲಕರ ಸಭೆ ಮಾಡಿದರು, ಆದರೆ ಶಾಲಾ ಭೂಧಾನಿ ಅಯ್ಯಪ್ಪ,ಪಾಲಕರಾದ ಸಣ್ಣಯಂಕಪ್ಪ, ಮುದಕಪ್ಪ,ಅಂಬಣ್ಣ,ಭೀಮೆಶ, ಸಿದ್ದಪ್ಪ,ಅಮರೇಶ ಇನ್ನಿತರರು ಸೇರಿ ಒಪ್ಪಲಿಲ್ಲ , ಹೀಗಾಗಿ ಸಮಸ್ಯೆಗೆ ಪರಿಹಾರ ಯಾವಗ,ಮಕ್ಕಳ ಮುಂದಿನ ಭವಿಷ್ಯ ಹೇಗೆ,ಸರಕಾರದ ಲಕ್ಷ ಲಕ್ಷರೂಪಯಿ ಕಟ್ಟಡ,ಸೌಲಭ್ಯಗಳು ಯಾರಿಗಾಗಿ, ಯಾವ ಪುರುಷರಾರ್ಥಕ್ಕೆ,ಈಗಲಾದರು ಶಿಕ್ಷಣ ಇಲಾಖೆಯ ಉನ್ನತಮಟ್ಡದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿದಿಗಳು ಸೇರಿ ಮಕ್ಕಳೆಂದರೆ ಅರಳುವ ಗುಲಾಬಿ ಇದ್ದಂತೆ,ಅವುಗಳನ್ನು ಬೆಳಸುತ್ತಾರೊ ಅಥವಾ ಬಿಳಿಸುತ್ತಾರೋ ಎಂಬುದೆ ಪ್ರಶ್ನೆ….

Leave a Reply

Your email address will not be published. Required fields are marked *