ಮಸ್ಕಿ : ತಾಲೂಕಿನ ಬಳಗಾನೂರು ಪಟ್ಟಣದ ಸೂಫಿ ಶರಣರಾದ ಮುಹಾಜೀರ್-ಏ-ಅರಬ್‌ಸ್ತಾನ್ ಹಜರತ್ ಸೈಯದ್ ಸುಲ್ತಾನ್ ಷಾಃ ಖಾದ್ರಿಯವರ ದರ್ಗಾದ ಉರುಸು ವಂಶಪಾರಂಪರ್ಯ ಮುತವಲ್ಲಿಗಳಾದ ಸೈಯ್ಯದ್ ಅಬ್ದುಲ್ ಖಾದರ ಭಾಷಾ ರವರ ನೇತೃತ್ವದಲ್ಲಿ ಬುದವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಸಂಜೆ 6 ಗಂಟೆಗೆ ಮೌಲಾನ ಸೈಯದ್ ಷಾಃ ಮಹಮೂದ್ ಖಾದ್ರಿ ಸಾಹೇಬ್ ಸಜ್ಜಾದ ನಶೀನ್ ಅವರ ಮನೆಯಿಂದ ವಂಶಪಾರಂಪರ್ಯದ ಮುತವಲ್ಲಿ ಹಫೀಜ್ ಸೈಯದ್ ಅಬ್ದುಲ್ ಖಾದರ್‌ಬಾಷ ಖಾದ್ರಿ ಸಾಹೇಬ್ ಅವರ ನೇತೃತ್ವದಲ್ಲಿ ಗಂಧ ಕಾರ್ಯಕ್ರಮ ಭಕ್ತಿಭಾವದಿಂದ ಆರಂಭವಾಯಿತು. ಡೊಳ್ಳು, ನಗಾರಿ ಹಾಗೂ ಧಾರ್ಮಿಕ ಘೋಷಣೆಗಳ ನಡುವೆ ನಡೆದ ಗಂಧ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ತುಂಬಿತು.
ನಂತರ ಮುಹಾಜೀರ್-ಏ-ಅರಬ್‌ಸ್ತಾನ್ ಹಜರತ್ ಸೈಯದ್ ಸುಲ್ತಾನ್ ಷಾಃ ಖಾದ್ರಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ, ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ನಾಮಸ್ಮರಣೆ ಮಾಡಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸದ್ಭಕ್ತರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು.ಈ ಉರುಸಿನಲ್ಲಿ ಮುಖ್ಯ ಅತಿಥಿಗಳಾಗಿ ಹಜರತ್ ಸೈಯದ್ ಷಾ: ಮುಜತಬಾ ನಬೀರ ಖಾದ್ರಿ ಸಾಹೇಬ್ ಆನೆಹೊಸುರು, ಹಜರತ್ ಸೈಯದ್ ಷಾಃ ಪೀರ್ ಪಾಷ ಖಾದ್ರಿ ಸಾಹೇಬ್ ಹಾಗೂ ಹಜರತ್ ಸೈಯದ್ ಮಹೆಬೂಬ ಪೀರ್ ಖಾದ್ರಿ ಸಾಹೇಬ್ ಮುಕ್ಕುಂದಾ ಶರೀಫ್, ಹಜರತ್ ಸೈಯದ್ ನಯೂಮ್ ಖಾದ್ರಿ ಸಾಹೇಬ್ ಕನ್‌ಲ್‌ಪೀರಾ ಮುದಗಲ್, ಹಜರತ್ ಸೈಯದ್ ಷಾ: ರಫೀಕ್ ಖಾದ್ರಿ ಸಾಹೇಬ್ ಬಳ್ಳಾರಿ, ಹಜರತ್ ಮೌಲಾನ ಸೈಯದ್ ಷಾ ನುರುದ್ದಿನ್ ಖಾದ್ರಿ ಸಾಹೇಬ್ ಸಿಂಧನೂರು, ಹಜರತ್ ಸೈಯದ್ ಷಾಃ ಆರಿಫ್ ಪಾಷ ಖಾದ್ರಿ ಸಾಹೇಬ್ ಮಾನ್ವಿ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಅದೇ ರೀತಿ ಹಜರತ್ ಸೈಯದ್ ಷಾ: ಅಬೀದ್ ಪಾಷ ಖಾದ್ರಿ ಸಾಹೇಬ್, ಹಜರತ್ ಸೈಯದ್ ಷಾ: ಜಿಲಾನಿ ಸಾಹೇಬ್ ಜಾಲ್‌ನವಿ, ಹಜರತ್ ಸೈಯದ್ ಷಾ: ಮಹೆಬೂಬ ಪಾಷ ಖಾದ್ರಿ ಖಾಜಿ, ಹಜರತ್ ಷಾ: ಮುಹ್ಮದ್ ಹುಸೇನ್ ಬಾಷ ಖಾದ್ರಿ ಹಾಗೂ ಹಜರತ್ ಷಾ: ಷಾಹುಸೇನ್ ಚಿತ್ತಿ ಉಲ್ ಖಾದ್ರಿ ಸೇರಿದಂತೆ ಹಲವು ಗಣ್ಯರು ಉರುಸಿಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮಾಜಿ ಮುತುವಲ್ಲಿಗಳಾದ ಜನಾಬ್ ಸೈಯದ್ ಷಕ್ಷಾವಲಿ ಸಾಹೇಬ್ ಖಾದ್ರಿ ಜಾಗಿರದಾರ್, ಜನಾಬ್ ಸೈಯದ್ ಮೋಧಿನ್ ಪಾಷ ಖಾದ್ರಿ ಜಾಗಿರದಾರ್, ಮೌಲ್ವಿ ಸೈಯದ್ ಹುಸೇನ್ ಬಾಷ ಖಾದ್ರಿ ಜಾಗಿರದಾರ್,ಮಾನ್ವಿ ಹಫೀಜ್ ಸೈಯದ್ ಖಾದರ್‌ಬಾಷ ಖಾದ್ರಿ ಜಾಗಿರದಾರ್ ಮುತವಲ್ಲಿ, ಸೇರಿದಂತೆ ಬಳಗಾನೂರು ಮತ್ತು ಸುತ್ತಲಿನ ಗ್ರಾಮದ ಅಪಾರ ಸಂಖ್ಯೆಯ ಸದ್ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಭಕ್ತಿ, ಸರ್ವಧರ್ಮ ಸಾಮರಸ್ಯ ಹಾಗೂ ಸೂಫಿ ಪರಂಪರೆಯ ಸುವಾಸನೆ ಹರಡಿದ ಈ ಉರುಸು ಕಾರ್ಯಕ್ರಮ ಬಳಗಾನೂರಿನಲ್ಲಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು.ಈ ಉರುಸಿಗೆ ಬಳಗಾನೂರು ಠಾಣೆಯ ಆರಕ್ಷಕರು ಸೂಕ್ತ ಬಂದೋಬಸ್ತನ್ನು ನೀಡುವ ಮೂಲಕ ಯಶಸ್ವಿಯಾಗಲು ಸಹಕರಿಸಿದರು.
ವರದಿ: ಸುರೇಶ ಬಳಗಾನೂರು

