ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ನಿಮಿತ್ಯ ತಂಬಾಕು ಸೇವನೆಯಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಜನರಲ್ಲಿ , ಯುವಕರಲ್ಲಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಹಮ್ಮಿಕೊಂಡು ಮಾತನಾಡಿದ ಡಾ. ಖಾಜಾ
ಖಾಜಾ ಮೊಹಿನುದ್ದೀನ್ ರವರು ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮನುಷ್ಯನ ಆರೋಗ್ಯಕ್ಕೆ ತಂಬಾಕು ಮಾರಕ , ತಂಬಾಕು ಹಾಗೂ ತಂಬಾಕು ಉತ್ಪನ್ನ ಬಳಕೆ ಇಂದು ಮಾನವನ ಅವಿಭಾಜ್ಯ ಅಂಶವಾಗಿದೆ . ತಂಬಾಕು , ಬೀಡಿ , ಸಿಗರೇಟ್ ಧೂಮಪಾನ ಹಾಗೂ ನಶೆ. ತಂಬಾಕು. ಗುಟ್ಕಾ ಸೇವನೆಯಿಂದ ಮಾರಕ ಕ್ಯಾನ್ಸರ್ ರೋಗ ಬರುತ್ತಿದೆ ಯುವ ಸಮುದಾಯ ಇದರಿಂದ ದೂರವಿದ್ದು ಆರೋಗ್ಯವಂತರಾಗಿರಲು ತಾಲೂಕು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ: ಖಾಜಾ ಮೊಹಿನುದ್ದೀನ್ ಸಲಹೆ ತಿಳಿಸಿದರು.
ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ: ಅಮರೇಶ ಪಾಟೀಲ ಅವರು ತಂಬಾಕಿನಲ್ಲಿರುವ 70 ವಿಷ ರಾಸಾಯನಿಕ ವಸ್ತುಗಳಿಂದ ಕ್ಯಾನ್ಸರ್ ಗೆ ಕಾರಣವಾಗಿವೆ. ನಿಕೋಟಿನ್,ನೈಟ್ರೋಸೊಮೈನ್ , ಬಿಂಜಿನ್, ಪಾಲಿಸೈಕ್ಲಿಕ್ ಎರುನಾಟಿಕ್ ಹೈಡ್ರೋಕಾರ್ಬೋನ್ ನಂತಹ ರಾಸಾಯನಿಕ ವಸ್ತುಗಳು ಇದರಲ್ಲಿವೆ. ಈ ಮಾದಕ ವಸ್ತು ಸೇವನೆಯಿಂದಶ್ವಾಸಕೋಶ ಕ್ಯಾನ್ಸರ್,ಹೃದಯಾಘಾತ, ದಂತ ಮತ್ತು ಬಾಯಿ ಕ್ಯಾನ್ಸರ್,ಅಲ್ಲದೇ ದೀರ್ಘ ಕಾಲದ ಉಸಿರಾಟದ ತೊಂದರೆಯಿಂದ ಕಾಯಿಲೆಗಳು ಉಂಟಾಗುತ್ತವೆ.ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಂಡು ಜೀವನ ಮಾಡಲು ಆರೋಗ್ಯ ವಂತರಾಗಿಬಾಳಲು ಮಾಹಿತಿ ನೀಡಿದರು. ತಂಬಾಕು ವಿರೋಧಿ ದಿನದ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್ ಜೋಶಿ ಬೋಧಿಸಿದರು . ಕಾರ್ಯಕ್ರಮದಲ್ಲಿ ದಂತ ವೈದ್ಯೆ ಡಾ: ಶೋಭಾ ನಾಯಕ , ಡಾ: ಪ್ರಗತಿ , ಡಾ: ಇಕ್ಬಾಲ್ , ಸಮಾಲೋಚಕರಾದ ನೀಲಾಂಬಿಕ , ಚಂದ್ರಕಲಾ, ರವಿ ಬಳಿಗಾರ್. ರವಿ ಮುಂಡೇವಾಡಿ , ಕ್ಷಯರೋಗ ಮೇಲ್ವಿಚಾರಕ ರವಿಕುಮಾರ ಹೂಗಾರ , ಅಮರೇಶ ಯಲಿಗಾರ್, ವಸೀಂ ರೆಹಮಾನ್, ಇಲಿಯಾಸ್ ಸೇರಿದಂತೆ ಸಾರ್ವಜನಿಕರು ಇದ್ದರು .

