ತಾಳಿಕೋಟಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆಯಲ್ಲಿ ಸುಮಾರು 44 ವರ್ಷಗಳ ಕಾಲ ದಿನಗೂಲಿ ನೌಕರರಾಗಿ ತಮ್ಮ ಸೇವೆಯನ್ನು ಪ್ರಾಮಾಣಿಕತೆ ಯೊಂದಿಗೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿರುವ ಬೆರಳಚ್ಚುಗಾರ ರವಿ ರಾಠೋಡ ಅವರ ವಿಶ್ರಾಂತ ಬದುಕು ನೆಮ್ಮದಿಯಿಂದ ಕೂಡಿರಲೆಂದು ಹಾರಿಸುತ್ತೇನೆ ಎಂದು ಕಾರ್ಯದರ್ಶಿ ಆರ್ ಎಸ್ ರಾಥೋಡ ಹೇಳಿದರು. ಸೋಮವಾರ ಪಟ್ಟಣದ ಎಪಿಎಂಸಿ ಕಾರ್ಯಾಲಯದ ಸಭಾಂಗಣದಲ್ಲಿ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ವಯೋನಿವೃತ್ತರಾದ ರವಿ ರಾಠೋಡ ಇವರಿಗೆ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ರವಿ ರಾಠೋಡ್ ಅವರ ಪ್ರಾಮಾಣಿಕ ಸೇವೆ ಸದಾ ಸ್ಮರಣೀಯವಾಗಿರುತ್ತದೆ ದಿನಗೂಲಿ ನೌಕರನಾಗಿ ಇಲಾಖೆಗೆ ಸೇರಿ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆ ಹಾಗೂ ದಕ್ಷತೆಯಿಂದ ನಿರ್ವಸಿದ್ದಾರೆ ನಾನು ಅವರಿಗೆ ಸಿಬ್ಬಂದಿ ವರ್ಗದ ಪರವಾಗಿ ಅಭಿನಂದಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯದರ್ಶಿ ಮೌನೇಶ, ಅಡತ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಲನಗೌಡ ಯಾದಗಿರಿ, ಗಣ್ಯರಾದ ಸಿ ಎಸ್ ಯಾಳಗಿ, ಎಂ.ಬಿ. ಕುಂಬಾರ, ಏ.ಐ.ಜಾಲವಾದಿ, ಪ್ರಭು ಬಿಳೆಭಾವಿ,ಡಿ.ಕೆ.ಪಾಟೀಲ, ಎಸ್‌.ಡಿ.ಬಿದರಗುಂದಿ,ಎಸ್.ಸಿ.ಇಜೇರಿ, ಅಶೋಕ್ ಚಿನಗುಡಿ, ಸಲೀಂ ಕಲಾಸಿ, ಗುಂಡಣ್ಣ ಹಂದಿಗನೂರ,ಡಿಸಲೆ, ಮಾರುಕಟ್ಟೆ ಸಹಾಯಕ ಎಸ್.ಆರ್.ಮಠ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *