ಮಾನ್ವಿ: ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕದಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಬಂಡೆಗುರು ಮನವಿ ಸಲ್ಲಿಸಿ ಮಾತನಾಡಿ ಶೈಕ್ಷಣಿಕಮಾಸ ಪ್ರಾರಂಭವಾಗಿರುವುದರಿAದ ತಾಲೂಕಿನ ವಿವಿಧ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿತ್ಯ ತಮ್ಮ ಗ್ರಾಮಗಳಿಂದ ಮಾನ್ವಿ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳಿಗೆ ಆಗಮಿಸುವುದರಿಂದ ಮಾನ್ವಿ ಸಾರಿಗೆ ಘಟಕದಿಂದ ಗ್ರಾಮಗಳಿಗೆ ಬೆಳಿಗ್ಗೆ , ಶಾಲಾ ಅವಾಧಿಗೆ ಪೂರಕವಾಗಿ ಬಸ್ ಗಳನ್ನು ಬಿಡಬೇಕು ಹಾಗೂ ಶಾಲಾ ಅವಧಿಯ ನಂತರ ಮರಳಿ ಗ್ರಾಮಗಳಿಗೆ ತೆರಳುವುದಕ್ಕೆ ಅನುಕೂಲವಾಗುವಂತೆ ಬಸ್‌ಗಳ ವ್ಯವಸ್ಥೆ ಮಾಡಬೇಕು ಹಾಗೂ ಕರೆಗುಡ್ಡ ಗ್ರಾಮದ ವಿದ್ಯಾರ್ಥಿಗಳಿಗೆ ಅನೂಕುಲವಾಗುವಂತೆ ಮಾನ್ವಿ ಬಸ್ ನಿಲ್ದಾಣದಿಂದ ಪ್ರತಿದಿನ ಮಾಧ್ಯಹ್ನಾನ 1.30ಕ್ಕೆ ಬಸ್ ಬೀಡಬೇಕು ಎಂದು ಒತ್ತಾಯಿಸಿದರು.
ಪಿರಬಾಷ,ಮಹಾಂತೇಶ್,ಪುನೀತ್,ನಿAಗಯ್ಯ,ಬಸವರಾಜ,ಇದ್ದರು.

Leave a Reply

Your email address will not be published. Required fields are marked *