ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳು ಸದಾ ಚಲಾವಣೆಯಲ್ಲಿರಬೇಕಾದರೆ ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಜರುಗಬೇಕು. ಅಲ್ಲದೇ ಎಲೆಯ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವುದರಿಂದ ಅವರ ಸಾಧನೆಗೆ ಹಾಗೂ ಮುಂದಿನ ಸಾಮಾಜಿಕ ಚಿಂತನೆಗೆ ಕಾರಣವಾಗುವುದು ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್ ಅಧ್ಯಕ್ಷರಾದ ಭೀಮಸೇನಾಚಾರ್ಯ ನವಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಿಂಧನೂರು ನಗರದ ಉಪ್ಪಾರವಾಡಿಯಲ್ಲಿರುವ ವಶಿಷ್ಠಧಾಮದಲ್ಲಿ ಜರುಗಿದ ಅಧಿಕಮಾಸದ ಸಾಮೂಹಿಕ ಸತ್ಯನಾರಾಯಣ ಪೂಜೆ, ಕುಮಾರಿ ಪೂಜೆ ಹಾಗೂ ವಶಿಷ್ಠಧಾಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.

ವಶಿಷ್ಠಧಾಮದಿಂದ ಶಿಕ್ಷಣ ಕ್ಷೇತ್ರ, ಸಾಮಾಜಿಕ ಸೇವೆ, ಕಲಾಸೇವೆ, ಸಂಗೀತ ಸೇವೆ ಹಾಗೂ ಬಾಲಪ್ರತಿಭೆಗಳನ್ನು ವಶಿಷ್ಠಧಾಮ ಪ್ರಶಸ್ತಿ ಪ್ರದಾನ ಆಯ್ಕೆ ಮಾಡುವ ಮೂಲಕ ಸದಾ ಸಾಮಾಜಿಕ ಚಿಂತನೆಯ ಜೊತೆ ಜೊತೆಗೆ ಸನಾತನ ಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಪ್ರತಿ ತಿಂಗಳು ಮಾಡಲಾಗುತ್ತಿದೆ ಎಂದರು. ಅತಿಥಿಗಳಾಗಿ ಆಗಮಿಸಿದ ಲಕ್ಷ್ಮಣರಾವ್ ಕುಲಕರ್ಣಿ ಮಾತನಾಡಿ ವಶಿಷ್ಠಧಾಮದಿಂದ ಆಚರಿಸುತ್ತಿರುವ ಕಾರ್ಯಕ್ರಮಗಳು ಮಕ್ಕಳಿಗೆ, ಭಜನಾ ಮಂಡಳಿಯವರಿಗೆ ಸಾಮಾಜಿಕ ಸೇವಾಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅನೇಕ ವರ್ಷಗಳಿಂದ ಮಾಡುತ್ತಿರುವ ನಿಶ್ಯಾಮ್‌ ಸೇವೆಯಾಗಿದೆ. ಯಾವುದೇ ಅಪೇಕ್ಷೆಯಿಲ್ಲದೆಯೇ ಇಂತಹ ಕಾರ್ಯಕ್ರಮಗಳು ಸಮಾಜದ ಶ್ಲಾಘನೀಯವಾಗಿದೆ ಎಂದರು.

ಶಿಕ್ಷಣ ಸೇವೆಯಲ್ಲಿ ಗಣನೀಯ ಸೇವೆಸಲ್ಲಿಸಿದ ಎಸ್.ಪಿ ವಿಷ್ಣುವರ್ಧನ ರೆಡ್ಡಿ ಶ್ರೀಮತಿ ಬಿ.ಸತ್ಯವತಿ, ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ಚಟುವಟಿಕೆಯಲ್ಲಿರುವ ಶ್ರೀ ಅಶೋಕ ನಲ್ಲ ಹಾಗೂ ಶ್ರೀಮತಿ ಊರ್ಮಿಳಾ ದಂಪತಿಗಳಿಗೆ ವಶಿಷ್ಠಧಾಮ ಆದರ್ಶ ದಂಪತಿಗಳು ಪ್ರಶಸ್ತಿ, ಅಮೃತ್ ಬದಿ ಟ್ಯಾಟೋ ಕಲಾವಿದರು ಇವರಿಗೆ ವಶಿಷ್ಠಧಾಮ ಕಲಾರತ್ನ ಪ್ರಶಸ್ತಿ, ಜೀ.ಟೀವಿಯ ಗಾಯನ ಬಾಲಪ್ರತಿಭೆ ಸ್ವರಾ ಜೋಶಿ ವಶಿಷ್ಠಧಾಮ ಬಾಲಸಂಗೀತ ರತ್ನ ಪ್ರಶಸ್ತಿ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ 2026 ಅಚಿವರ ಪ್ರಶಸ್ತಿ ಪಡೆದ ಕು.ಶ್ರೀರಕ್ಷ ಕುಲಕರ್ಣಿ ವಶಿಷ್ಠ ಬಾಲಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕುಮಾರಿ ಪೂಜಾ ಧಾರ್ಮಿಕ ಕಾರ್ಯಕ್ರಮಗಳನ್ನು ಭಾರದ್ವಾಜ ಉಪ್ಪಳ ನೇರವೇರಿಸಿದರು. ಕಾರ್ಯಕ್ರಮದ ಸ್ವಾಗತ ಭಾಷ ಪ್ರಶಾಂತ ಕುಲಕರ್ಣಿ, ಪ್ರಾರ್ಥನಾ ಗೀತೆ ಪ್ರತಿಭಾ ಕುಲಕರ್ಣಿ ನಿರೂಪಣೆಯನ್ನು ಪಾಂಡುರಂಗ ದೇಸಾಯಿ ನೇರವೇರಿಸಿದರು. ವೆಂಕಟೇಶಪ್ಪ, ಜಯತೀರ್ಥ ದಾಸ ವೆಲಕಟೇಶ ಶ್ರೇಷ್ಠ ಕನ್ನಾರಿ, ಮಲ್ಕಾಪುರ ರಾಘವೇಂದ್ರ ಶ್ರೇಷ್ಠ, ವರದರಾಜ ಶ್ರೇಷ್ಠ ಅರಳಹಳ್ಳಿ ಮಹಿಳಾ ಭಜನಾ ಮಂಡಳಿಯ ಈರಮ್ಮ ಪದ್ಮಾವತಿ, ಶೋಭಾ ಕವಲಿ, ಲಕ್ಷ್ಮೀದೇವಿ, ಹಾಗೂ ಕಮಲಮ್ಮ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

Leave a Reply

Your email address will not be published. Required fields are marked *