ಬಳ್ಳಾರಿ / ಕಂಪ್ಲಿ: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂರು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಮುಸ್ಲಿಂರು ಖದಿಂ ಈದ್ಗಾ ಮೈದಾನದಲ್ಲಿ ತೆರಳಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತ್ಯಾಗವನ್ನು ನೆನಪಿಸುವುದು ‘ಬಕ್ರೀದ್‌’ನ ಮುಖ್ಯ ಆಶಯ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ದೇವನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಅಲ್ಲಾಹನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್ ಅವರನ್ನು ಬಲಿದಾನ ನೀಡಲು ಮುಂದಾಗುವರು ತಮ್ಮ ಮಗನನ್ನೇ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿ ಅರ್ಪಿಸುವಂತೆ ಸೂಚಿಸುತ್ತಾರೆ ಎಂದು ಮುಸ್ಲಿಮರ ಧರ್ಮಗ್ರಂಥದಲ್ಲಿ ತಿಳಿಸಲಾಗಿದೆ ಎಂದು ಮುಸ್ಲಿಂ ಧರ್ಮ ಗುರುಗಳಾದ ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರಫ್ ಆಜಂ ಪಾಷಾ ಖಾದ್ರಿ ಸಾಹೇಬ್ ತಿಳಿಸಿದರು.

ಅವರು ಹೊಸ ಬಸ್ ನಿಲ್ದಾಣದ ಹತ್ತಿರ ಇರುವ
ಮುದ್ದಾಪುರ ರಸ್ತೆಯಲ್ಲಿ ಇರುವ ಖದಿಂ ಸುನ್ನಿ ಈದ್ದಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಪ್ರವಚನ ನೀಡಿ ಮಾತನಾಡಿದರು.

ಹಬ್ಬದ ಸಂದೇಶ ಸಾರಿ, ದಾನ – ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸೈಯ್ಯದ್ ಷಾಹ್ ಅಬ್ದುಲ್ ಖಾದರ್ ಖಾದ್ರಿ ಉರ್ಪ್ ಮುಕ್ತಿಯರ್ ಸಾಹಿಬ್, ಸೈಯದ್ ಮುನ್ನಾಸಾಹೇಬ್ ಖಾದ್ರಿ, ಸೈಯ್ಯದ್ ಉಮೇಶ್ ಸಾಹೇಬ್ ಖಾದ್ರಿ, ಮಸೀದಿಗಳ ಪೇಶ ಇಮ್ಮಮ್ ರುಗಳು, ಖದೀಮ ಸುನ್ನಿ ಈದ್ಗಾ ಮೈದಾನದ ಅಧ್ಯಕ್ಷರಾದ ಎಂ. ಇಸ್ಮಾಯಿಲ್, ಉಪಾಧ್ಯಕ್ಷ ಮೆಹೆಬೂಬ್, ಕಾರ್ಯದರ್ಶಿ ಬಿ. ಜಾಫರ್ ಸಾಧಿಕ್, ಸಹ ಕಾರ್ಯದರ್ಶಿ ನೂರ್ ಅಹಮ್ಮದ್, ಖಜಾಂಜಿ ಲಡ್ಡು ಅಬ್ದುಲ್ ಕರೀಮ್, ಸದಸ್ಯರುಗಳಾದ ಮಾಬುಸಾಬ್, ನಜೀರ್, ಖಲಿಲ್, ಪಂಜು ಮೈನುದ್ದಿನ್,ರಿಯಾಜ್ ಸಂಡೂರ್ ಅಸಿಫ್, ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *