ತಾಲೂಕಿನ ಜಾಲಿಹಾಳ ಗ್ರಾಮದ ಗ್ರಂಥಾಲಯದಲ್ಲಿ ಏ.16 ಗುರುವಾರದಂದು ಮಕ್ಕಳಿಗಾಗಿ ಅರಿವು ನೆರವು ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಜಯಶ್ರೀ ಪಟೇಲ್ ಹಾಗೂ ವಿದ್ಯಾರ್ಥಿ ಬಸವರಾಜ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕೇಂದ್ರ ಗ್ರಂಥ ಪಾಲಕ ಎಸ್.ನಾಗರಾಜ ನಾಗಲಿಕರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವ ಅಂದರೆ ಅದು ಸಮಯ ಇಂತಹ ಸಮಯವನ್ನು ವ್ಯರ್ಥ ಮಾಡದೆ, ಸಮಯಕ್ಕೆ ಅತ್ಯಂತ ಗೌರವ ಕೊಟ್ಟು, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಸಮಗ್ರವಾದ ಮಾಹಿತಿಯ ಕೈಪಿಡಿ ಪುಸ್ತಕಗಳು ಇಲ್ಲಿ ಸಿಗುತ್ತವೆ. ಅತಿ ಹೆಚ್ಚಿನ ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳಿಗೆ ಪುಸ್ತಕಳೇ ಕಾರಣವಾದ್ದರಿಂದ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಎಲ್ಲಿಯೂ ಕೂಡ ತಿರುಗಾಡದೆ, ಸಮಯವನ್ನು ವ್ಯರ್ಥ ಮಾಡದೆ, ಶಾಲಾ ಕಾಲೇಜುಗಳು ರಜಾ ಇರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಕ್ಕೆ ನೆರವಾಗಲು ಈ ವಿಶೇಷ ಕಾರ್ಯಕ್ರಮವಾದ ಅರಿವು-ನೆರವು ಮೂಲಕ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಈ ಕೇಂದ್ರ ಗ್ರಂಥಾಲಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

 

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜಯಶ್ರೀ ಮಾತನಾಡಿ, ಜಾಲಿಹಾಳ ಗ್ರಾಮದ ಕೇಂದ್ರ ಗ್ರಂಥಾಲಯದಲ್ಲಿ ಯುವಕರಿಗಾಗಿ, ವಿದ್ಯಾರ್ಥಿಗಳಿಗಾಗಿ, ಮಕ್ಕಳಿಗಾಗಿ ಅರಿವು-ನೆರವು ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಶ್ಲಾಘನೀಯವಾದದು, ಈ ಗ್ರಂಥಾಲಯಕ್ಕೆ ಒಳಪಡುವ ಎಲ್ಲಾ ಮಕ್ಕಳು ಯುವಕರು ಆದಿಯಾಗಿ ಪ್ರತಿಯೊಬ್ಬರು ತಮ್ಮ ಜ್ಞಾನರ್ಜನೆಗಾಗಿ ಗ್ರಂಥಾಲಯದಲ್ಲಿರುವ ಮಾಹಿತಿಗಳ ಸಂಗ್ರಹಿಸಲು ಸದುಪಯೋಗ ಪಡಿಸಿಕೊಳ್ಳಿ ಎಂದರು.

 

ಈ ವೇಳೆ: ಶಾಲಾ ಶಿಕ್ಷಕರಾದ ಖಾಜಾಸಾಬ್‌, ವಿ.ಆರ್ ಡಬ್ಲ್ಯೂ ವೀರಭದ್ರಪ್ಪ, ವಿದ್ಯಾರ್ಥಿಗಳಾದ ನಂದೀಶ, ಗುರುಪ್ರಸಾದ, ಸಂಪತಕುಮಾ‌ರ, ಬಸವರಾಜ, ಹಾಗೂ ವೀರೇಂದ್ರಗೌಡ, ಸೇರಿದಂತೆ ಅನೇಕ ಮಕ್ಕಳು ಯುವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *