ಮಾನ್ವಿ: ಪ್ರಶಿಕ್ಷಣಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಿಂದ ಭಾವಿ ಶಿಕ್ಷಕರಾಗಿ ಎಂದು ಎಸ್ ಎಸ್ ಪಾಟೀಲ್ ಹೇಳಿದರು.ಪಟ್ಟಣದ ಶಾರದಾ ವಿದ್ಯಾನಿಕೇತನ ಡಿಎಡ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿಎಸ್ ಎಸ್ ಪಾಟೀಲ್ ಪ್ರಾಚಾರ್ಯರು ಕಲ್ಮಠ ಪದವಿ ಪೂರ್ವ ಕಾಲೇಜು ಇವರು ಪ್ರಶಕ್ಷಣಾರ್ಥಿಗಳನ್ನು ಕುರಿತು ಮಾತನಾಡುತ್ತಾ ಪ್ರಶಿಕ್ಷಣಾರ್ಥಿಗಳು ತಮ್ಮ ಸತತ ಪ್ರಯತ್ನದ ಮೂಲಕ ಮತ್ತು ಶಿಕ್ಷಕರ ಸೂಕ್ತ ಮಾರ್ಗದರ್ಶನದ ಮೂಲಕ ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಬಹುದು ಎನ್ನುವಂತ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಈ ಕಾರ್ಯಕ್ರಮವನ್ನು ಉದ್ಘಾಟಿಸಿದಂತಹ ಶಾರದಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ಹೈಂದವಿ ಉದ್ಘಾಟನಾ ನುಡಿಯನ್ನು ನುಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಡಿಎಡ್ ಕಾಲೇಜಿನ ಪ್ರಾಚಾರ್ಯರಾದ ಹನುಮಂತಗೌಡ ಅವರು ಪ್ರಶಿಕ್ಷಣಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ತಾವೆಲ್ಲರೂ ಪ್ರಯತ್ನದ ಮೂಲಕ ಅವಕಾಶಗಳನ್ನ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಡಿಎಡ್ ಕಾಲೇಜಿನ ಉಪನ್ಯಾಸಕರಾದ ಹನುಮಂತಪ್ಪ ಹರಿವಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಉಮಾಮಹೇಶ್ವರಿ, ಶಾರದಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಬಿ ಕಿಶೋರ್ ಕುಮಾರ್.ಮಂಜುಳಾ ಕಿಶೋರ್ ಕುಮಾರ್ ಬಿ ಇಡಿ ಕಾಲೇಜಿನ ಪ್ರಾಚಾರ್ಯರಾದ ಡಾ.ಪರಮೇಶ್ವರಪ್ಪ ಗೋಪಾಶೆಟ್ಟಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಪಾಲ್ಗೊಂಡಿದ್ದರು ಈ ಕಾರ್ಯಕ್ರಮವನ್ನು ಪ್ರಥಮ ವರ್ಷದ ಪ್ರಶಕ್ಷಣಾರ್ಥಿಯಾದ ರತ್ನ ನಿರೂಪಿಸಿದರು ಮೌನೇಶ್ ಸ್ವಾಗತಿಸಿದರು ಶ್ರೀದೇವ ವಂದಿಸಿದರು.

