ಮಸ್ಕಿ: ಪಟ್ಟಣದಲ್ಲಿ ತಾಲೂಕು ಆಡಳಿತ,ತಾ.ಪಂ,ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಶಾಸಕ ಆರ್ ಬಸನಗೌಡ ತುರುವಿಹಾಳ ಚಾಲನೆ ನೀಡಿ, ಜೊತೆಗೆ ದಲಿತಪರ ಸಂಘಟನೆಗಳು ಪದಾಧಿಕಾರಿಗಳು ಅಭಿಮಾನಿಗಳು
ಈ ಅದ್ದೂರಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೇರಗು ನೀಡಿದರು.
ಈ ವೇಳೆ ಬಿರು ಬಿಸಿಲು ಮದ್ಯೆ ಶಾಸಕರು ಹಾಗೂ ಮುಖಂಡರು, ಅಭಿಮಾನಿಗಳುಹಾಡಿಗೆ ಭರ್ಜರಿ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಪುರಸಭೆ ಅಧ್ಯಕ್ಷ ಸುರೇಶ ಅರಸುರು, ತಹಸೀಲ್ದಾರ ಮಂಜುನಾಥ ಭೋಗವತಿ,ಸಿಪಿಐ ಆರ್.ವೈ.ಜಲಗೇರಿ,ತಾಲ್ಲೂಕು ಪಂಚಾಯಿತಿ ಇಓ ಅಮರೇಶ ಯಾದವ್,ಪುರಸಭೆ ಮುಖ್ಯಅಧಿಕಾರಿ ನರಸರೆಡ್ಡಿ , ಮುಖಂಡರಾದ ಎಚ್.ಬಿ.ಮುರಾರಿ, ಮಲ್ಲಿಕಾರ್ಜುನ್ ಪಾಟಿಲ್ ಯದ್ದಲದಿನ್ನಿ ,ದಾನಪ್ಪ ನೀಲೋಗಲ್,ದೊಡ್ಡಪ್ಪ ಮುರಾರಿ,ಮಲ್ಲಯ್ಯ ಬಳ್ಳಾ,ಹನುಮಂತಪ್ಪ ವೆಂಕಟಾಪೂರು,ಮೈಬುಸಾಬ್ ಮುದ್ದಾಪುರ,,ಹನುಮಂತಪ್ಪ ಮುದ್ದಾಪುರ,ನಾಗಭೂಷಣ ಹಾಗೂ ಇನ್ನು ಅನೇಕರು ಇದ್ದರು.

Leave a Reply

Your email address will not be published. Required fields are marked *