ರಾಯಚೂರು : ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ದಿನಾಂಕ 10.04.2026 ರಂದು ಗ್ರಾಮದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಭೆ ಸೇರಿ ನೂತನವಾಗಿ ಜಾಮಿಯಾ ಮಸೀದ್, ಈದ್ಗಾ ಹಾಗೂ ಖಬ್ರಿಸ್ಥಾನ್ ಕಾರ್ಯಗಳಿಗೆ ಒಂದೇ ಸಮಿತಿ ರಚಿಸಿದರು.
ಗ್ರಾಮದ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ಹಾಗೂ ಸಮುದಾಯ ಕಾರ್ಯಗಳನ್ನು ಒಂದೇ ಸಮಿತಿಯ ಮೂಲಕ ನಿರ್ವಹಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ.
ನೂತನ ಸಮಿತಿ ಸದಸ್ಯರು:
1. ಮೊಹಮ್ಮದ್ ರಫಿ ತಂದೆ: ನಜೀರ್ ಅಹ್ಮದ್ – ಅಧ್ಯಕ್ಷರು
2. ಖಾಜಾ ಹುಸೇನ್ ತಂದೆ: ಬಶೀರ್ ಅಹ್ಮದ್ – ಕಾರ್ಯದರ್ಶಿ
3. ಅಬ್ಬಾಸ್ ಅಲಿ ತಂದೆ: ಖಾಜಾ ಹುಸೇನ್ – ಖಜಾಂಚಿ
4. ಬಂದೇನವಾಜ್ ತಂದೆ: ಗೂಡು ಹುಸೇನ್ – ಸದಸ್ಯರು
5. ಅಲ್ಲಬಕಾಶ್ ತಂದೆ: ಸಬ್ಜಲಿ ಸಾಬ್ – ಸದಸ್ಯರು
6. ನೂರ್ ಅಹ್ಮದ್ ತಂದೆ: ಬಶೀರ್ ಅಹ್ಮದ್ – ಸದಸ್ಯರು
7. ಬಂದೇನವಾಜ್ ತಂದೆ: ಮಟ್ಮಾರಿ ಬಡೆಸಾಬ್ – ಸದಸ್ಯರು
8. ಮುಜ್ಜು ಪಟೇಲ್ ತಂದೆ: ಮಹಿಬೂಬ್ – ಸದಸ್ಯರು
9. ಸದ್ದಾಮ್ ಹುಸೇನ್ ತಂದೆ: ಖಾಸಿಂ ಅಲಿ – ಸದಸ್ಯರು
10. ರಶೀದ್ ತಂದೆ: ಚೌದ್ರಿ ಖಲೀಲ್ – ಸದಸ್ಯರು
11. ಮೊಹಮ್ಮದ್ ತಂದೆ: ವಾಲೇಕರ್ ಬಡೆಸಾಬ್ – ಸದಸ್ಯರು
ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿ ಖಾಜಾ ಹುಸೇನ್ ಅವರು ಮಾತನಾಡಿ, “ನಮ್ಮ ಗ್ರಾಮದಲ್ಲಿ ಮೊದಲಿನಿಂದಲೂ ಒಂದೇ ಸಮಿತಿ ಕಾರ್ಯನಿರ್ವಹಿಸುವ ಪದ್ಧತಿ ಇದೆ. ಇದು ಊರಿನ ಎಲ್ಲಾ ಮುಸ್ಲಿಂ ಬಾಂಧವರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಸಭೆಯಲ್ಲಿ ಮುಫ್ತಿ ನಬಿಸಾಬ್, ಅಫ್ಜಲ್ ಸಾಬ್ (ಮೆಕಾನಿಕ್), ಮೊಹಮ್ಮದ್ ಹನೀಪ್ ಸಾಬ್, ಬಂಡಿ ರಜಾಕ್ ಸಾಬ್, ರಾಜಹಮದ್, ಚಾಂದ್ ಪಾಷಾ, ಖಾಜಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


