ಸಿಂಧನೂರು : ನಗರದ ತೋಟದ್ ಆಸ್ಪತ್ರೆ ವತಿಯಿಂದ ಡಾ॥ ದಿ॥ ಎಚ್.ಎಸ್. ತೋಟದ್ ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಏಪ್ರಿಲ್ 14ರಂದು ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಸಾರ್ವಜನಿಕರಿಗೆ ರಕ್ತದೊತ್ತಡ (BP), ಶುಗರ್ ಪರೀಕ್ಷೆ, ಇಸಿಜಿ (ECG) ಪರೀಕ್ಷೆ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಸಂಪೂರ್ಣ ಉಚಿತವಾಗಿ ನಡೆಸಲಾಗುತ್ತದೆ. ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶಿಬಿರದಲ್ಲಿ ಖ್ಯಾತ ವೈದ್ಯರಾದ ಡಾ॥ ಹರ್ಷ ತೋಟದ್ (M.D – ಜನರಲ್ ಫಿಜಿಷಿಯನ್) ಹಾಗೂ ಡಾ॥ ಸೀಮಾ ತೋಟದ್ (ರೇಡಿಯಾಲಜಿಸ್ಟ್) ಅವರು ಭಾಗವಹಿಸಿ ರೋಗಿಗಳಿಗೆ ಆರೋಗ್ಯ ಸಲಹೆ, ತಪಾಸಣೆ ಹಾಗೂ ಅಗತ್ಯ ವೈದ್ಯಕೀಯ ಮಾರ್ಗದರ್ಶನ ನೀಡಲಿದ್ದಾರೆ.
ಸಿಂಧನೂರು ನಗರದ ಬಸ್ ಸ್ಟ್ಯಾಂಡ್ ಎದುರುಗಡೆಯಲ್ಲಿರುವ ತೋಟದ್ ಆಸ್ಪತ್ರೆ ಆವರಣದಲ್ಲಿ ಶಿಬಿರ ನಡೆಯಲಿದ್ದು, ಆಗಮಿಸುವ ಸಾರ್ವಜನಿಕರಿಗಾಗಿ ಅನ್ನಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಆರೋಗ್ಯವೇ ಮಹಾಭಾಗ್ಯ ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಸೇವೆಯ ಸದುಪಯೋಗ ಪಡೆಯುವಂತೆ ತೋಟದ್ ಆಸ್ಪತ್ರೆ ಆಡಳಿತ ಮಂಡಳಿ ಮನವಿ ಮಾಡಿದೆ.

