ಮಾನ್ವಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 593 (98.83%)ಅಂಕಗಳನ್ನು ತೆಗೆದು ಕೊಂಡು ಅಮೋಘ ಸಾಧನೆ ಮಾಡಿದ ದುರ್ಗಾಭವಾನಿ, ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಅಲ್ಲದೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ದ್ವಿತೀಯ ರ್ಯಾಂಕ್ ಮತ್ತು ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಾಳೆ.ಬಡತನದಲ್ಲಿ ಅರಳಿದ ಪ್ರತಿಭೆ
ಅಮರಾವತಿ ಗ್ರಾಮದ ಬಸವರಾಜ ಅವರ ಮಗಳಾದ ದುರ್ಗಾಭವಾನಿ ಅವರ ಈ ಸಾಧನೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರತಿಭೆಗೆ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷರಾದ ರಾಮಣ್ಣ ನಾಯಕ ತಾಲೂಕ ಪ್ರಧಾನ ಕಾರ್ಯದರ್ಶಿ ಕೊಂಡಯ್ಯ ನಾಯಕ, ಮಾಜಿ ಯೋಧರಾದ ಜೆಲ್ಲಿ ಅಂಜಿನೆಯ್ಯ ನಾಯಕ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ವಿದ್ಯಾರ್ಥಿನಿಯ ಶ್ರಮ, ಕುಟುಂಬದ ಬೆಂಬಲ ಹಾಗೂ ಉಪನ್ಯಾಸಕರ ಮಾರ್ಗದರ್ಶನವೇ ಈ ಸಾಧನೆಗೆ ಕಾರಣವೆಂದು ದುರ್ಗಾಭವಾನಿ ತಿಳಸಿದ್ದಾಳೆ.ಈ ಸಂದರ್ಭದಲ್ಲಿ ಶಿವಶಂಕ್ರಯ್ಯ ಸ್ವಾಮಿ, ಶಂಕರಪ್ಪ ನಕ್ಕುಂದಿ,ಶರಣಪ್ಪ ನಂದಿಹಾಳ ಆಂಜನೇಯ ನಾಯಕ ನಸಲಾಪುರ, ಜಿ.ನರಸಿಂಹ ನಾಯಕ ಕರಡಿಗುಡ್ಡ, ರಾಘವೇಂದ್ರ ನಾಯಕ ಕಪಗಲ್,ಶಿವಕುಮಾರ ನಾಯಕ, ಭೀಮಯ್ಯ ನಾಯಕ, ಹುಲಿರಾಜ್ ನಾಯಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *