ಮಸ್ಕಿ: ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಅವರ 84 ನೇ ಹುಟ್ಟು ಹಬ್ಬದ ಅಂಗವಾಗಿ ಮಸ್ಕಿ ಪಟ್ಟಣದ ಬಸವರಾಜ ಪಾಟೀಲ್ ಆನ್ವರಿ ಬಳಗದ ವತಿಯಿಂದ
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬಸವರಾಜ ಪಾಟೀಲ್ ಆನ್ವರಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ
ಖಾಸಗಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಆನ್ವರಿ ಅಭಿಮಾನಿಗಳ ಬಳಗದ ಸದಸ್ಯರಾದ ಸುರೇಶ ಹರಸೂರು, ಎಂ.ಅಮರೇಶ, ಸೂಗಣ್ಣ ಬಾಳೆಕಾಯಿ, ಶರಣಬಸವ ಸೂಪ್ಪಿಮಠ, ಸುರೇಶ್ ಬ್ಯಾಳಿ, ಕೃಷ್ಣಾ ಡಿ.ಚಿಗರಿ, ಮಂಜುನಾಥ ಮಾಟೂರು ನಾಗರಾಜ ಯಂಬಲದ, ಅಮರೇಶ ಸಾಲಿಮಠ, ಸೂಗಪ್ಪ ಮರಳದ, ಶಿವು ಬ್ಯಾಳಿ, ರಾಜು ಹಾಗೂ ಇನ್ನಿತರರು ಉಪಸ್ಥಿತಿ ಇದ್ದರು.

