ಮಸ್ಕಿ ಪಟ್ಟಣದ ಶ್ರೀ ಬ್ರಹ್ಮರಾoಭ ದೇವಸ್ಥಾನದಲ್ಲಿ ನಡೆದ ಪ್ರಶಿಕ್ಷಣ ವರ್ಗದ ಎರಡು ದಿನದ
ಸಮಾರೋಪ ಅತ್ಯಂತ ಯಶಸ್ವಿಯಾಗಿ ನಡೆಯಿತು, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಸದುಪಯೋಗವನ್ನು ಕಾರ್ಯಕರ್ತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಮಾತನಾಡಿದರು. ನಂತರ ಶರಣಬಸವ ಸೊಪ್ಪಿಮಠ ಬಿಜೆಪಿ ಮಂಡಲ ಅಧ್ಯಕ್ಷರು ಮಾತನಾಡಿ ಸಮಾರಂಭಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಕಾಂತ ಪಾಟೀಲ್ ಗೋಗಿಬಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ರಾಜ್ಯ ಎಸ್ ಸಿ ಮೋರ್ಚಾ ವಕ್ತಾರಾದ ಶರಣಬಸವ ವಕೀಲ ಉಮ್ಲೂಟಿ, ಜಿಲ್ಲಾ ಕಾರ್ಯದರ್ಶಿ ಶಾರದಾ ರಾಥೋಡ, ಬಸಮ್ಮ ಯಾದವ, ಪುರಸಭೆ ಅಧ್ಯಕ್ಷರಾದ ಸುರೇಶ ಅರಸುರು ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಗುಡಿಹಾಳ ರಮೇಶ್ ಉದ್ಬಾಳ್ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.

