ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಪರಿಷತ್ ಸಭಾ ನಾಯಕರಾದ ಶ್ರೀ ಎನ್‌.ಎಸ್‌. ಬೋಸರಾಜು ಅವರು ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ್ ಸಾಹುಕಾರ್ ಅವರು ನೂತನವಾಗಿ ಆಯ್ಕೆಯಾದ 12 ಜನ ನಿರ್ದೇಶಕರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಹಾಗೂ ಶಾಸಕರು, ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಎಲ್ಲಾ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಪಕ್ಷ ಯಾರನ್ನು ಆಯ್ಕೆ ಮಾಡಿದರೂ ಎಲ್ಲ ಸದಸ್ಯರೂ ಅದನ್ನು ಒಪ್ಪಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಪೂರ್ಣ ಆಡಳಿತ ನಡೆಸಲು ಎಲ್ಲರ ಸಹಕಾರ ಅಗತ್ಯವಿದ್ದು, ಬ್ಯಾಂಕ್ ಮೂಲಕ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ತಲುಪಿಸಿ ಬ್ಯಾಂಕ್ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ರುದ್ರಪ್ಪ ಅಂಗಡಿ (ಮಾಜಿ ನಗರಸಭಾ ಸದಸ್ಯರು, ರಾಯಚೂರು), ಅಬ್ದುಲ್ ಗಫರ್ ಸಾಬ್ (ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನಗರ ಯೋಜನಾ ಪ್ರಾಧಿಕಾರ, ಮಾನ್ವಿ), ಅಮರೇಗೌಡ ಹಂಚಿನಾಳ್, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ. ಅಂರೇಶಪ್ಪ (ವಕೀಲರು), ಶಾಸಕರ ಸುಪುತ್ರ ಹಾಗೂ ಮಾಜಿ ಎಪಿಎಂಸಿ ನಿರ್ದೇಶಕರಾದ ಶಿವರಾಜ್ ನಾಯಕ್ (ವಕೀಲರು), ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಿರಲಿಂಗಪ್ಪ ಕವಿತಾಳ, ರೌಡ್ರು ಮಹಾಂತೇಶ್ ಸ್ವಾಮಿ, ಗುಡದಿನ್ನಿ ಶರಣಯ್ಯ ನಾಯಕ್, ಸೈಯದ್ ನಜರುದ್ದೀನ್ ಖಾದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚುನಾವಣೆಯಲ್ಲಿ ವಿಜೇತರಾದ ಬಸವರಾಜಪ್ಪ ಗೌಡ ಕತರಿಕಿ, ಸಿದ್ದರಾಮಪ್ಪ ಸಾಹುಕಾರ್, ಗಣೇಶ್, ಶ್ರೀಮತಿ ರಜಿ, ಸುಂದರ್ ಕಪಗಲ್, ಯಾರಿಸ್ವಾಮಿ, ಶ್ರೀಮತಿ ರೇಣುಕಾ ಚನ್ನಪ್ಪ, ಶ್ರೀಮತಿ ರಫಿಯಾ ಬೇಗಂ, ಶಿವಶಂಕರ್ ಗೌಡ, ಶಿವರಾಜ್, ಶ್ರೀಮತಿ ಜಯಶ್ರೀ (ಹನುಮಂತ ಅವರ ಪತ್ನಿ), ಸಯ್ಯದ್ ಮುಸ್ತಫ, ರಾಜೇಶ್ ಕವಿತಾಳ, ಮೌನೇಶ್ ನಾಯಕ್ ಕವಿತಾಳ, ಸತ್ತಾರ್ ಬಂಗ್ಲೆವಾಲೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *