ಕವಿತಾಳ : ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿರವಾರ್ ತಾಲೂಕಿನ ಕವಿತಾಳ ಪಟ್ಟಣದಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಈ ದಿನ ಮಹತ್ವದ ಚಾಲನೆ ದೊರೆಯಿತು. ರಾಜ್ಯ ಸರ್ಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಧಾನ ಪರಿಷತ್ ಸಭಾ ನಾಯಕರಾದ ಶ್ರೀ ಎನ್.ಎಸ್. ಬೋಸರಾಜು ಜಿ ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ್ ಸಾಹುಕಾರ್ ಅವರು ಪಟ್ಟಣದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಎಲ್ಲಾ ಸಮುದಾಯಗಳ ಸೌಹಾರ್ದತೆಯನ್ನು ಬಲಪಡಿಸುವ ಉದ್ದೇಶದಿಂದ ಶಿವಪ್ಪ ಮಠದ ಸಮೀಪ ಸಮುದಾಯ ಭವನ ನಿರ್ಮಾಣ, ಕವಿತಾಳ ಕಲಮಟ್ಟದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು, ಕ್ಷತ್ರಿಯ, ಬ್ರಾಹ್ಮಣ, ಆರ್ಯವೈಶ್ಯ, ಬಲಿಜ ಹಾಗೂ ರಾಜಪುತ ಸಮಾಜಗಳ ಮುಕ್ತಿದಾಮ ಅಭಿವೃದ್ಧಿ ಕಾರ್ಯಗಳು, ಉಪ್ಪಾರ್ ಓಣಿಯ ವಾರ್ಡ್ ನಂ.10ರ ಶ್ರೀ ಆಂಜನೇಯ ದೇವಸ್ಥಾನದ ಅಭಿವೃದ್ಧಿ, ಮುಸ್ಲಿಂ ಸಮುದಾಯದ ಶಾದಿ ಮಹಲ್ ನಿರ್ಮಾಣ ಹಾಗೂ ಪಟ್ಟಣದ ಚರ್ಚ್ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಒಟ್ಟು ₹1 ಕೋಟಿ 75 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಪಟ್ಟಣದ ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹಾಗೂ ಶಾಸಕರು ತಿಳಿಸಿದರು. ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಗುಣಮಟ್ಟದೊಂದಿಗೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರುದ್ರಪ್ಪ ಅಂಗಡಿ (ರಾಯಚೂರು), ಅಮರೇಗೌಡ ಹಂಚಿನಾಳ (ರಾಯಚೂರು), ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಿರಿ ಲಿಂಗಪ್ಪ, ಶಿವಣ್ಣ ವಕೀಲರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಾಳಪ್ಪ, ರಾಜೇಶ್ ಬನ್ನಿಗಿಡ, ಶರಣಬಸವ ಹಣಗಿ, ಚಾಂದ್ ಪಾಷಾ, ತಿಪ್ಪಯ್ಯಸ್ವಾಮಿ, ಮಲ್ಲಿಕಾರ್ಜುನ ಗೌಡ, ಶೇಖರಪ್ಪ ಸಾಹುಕಾರ್, ಶೇಖರಪ್ಪ ಗೌಡ ವಂದಲಿ, ಲಿಂಗರಾಜ್ ಕಂದಗಲ್, ಮೌನೇಶ್ ನಾಯಕ್, ಅಯ್ಯಪ್ಪ ನೀಲಗೋಲ್ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *