ಲಿಂಗಸಗೂರು : ಏ, 11 – ಲಿಂಗಸಗೂರು ತಾಲೂಕಿನ ಗೊರೇಬಾಳ ತಾಂಡಾದ ಚೇತನ ತಂದೆ ಲೋಕಪ್ಪ ಇವರು ದನದ ಶೆಡ್ ನಿರ್ಮಿಸಿದ್ದು ಅದಕ್ಕೆ ಸಹಾಯಧನವಾಗಿ ಸರಕಾರದಿಂದ ಹಣ ಬಂದಿದ್ದು ಸದರಿ ಗೋರೆಬಾಳ ಗ್ರಾಮಪಂಚಾಯತಿ ಪಿಡಿಓ ಆದ ಮಹ್ಮದ ಖಾಜಾ ಇವರು ಸಹಾಯಧನದ ಹಣದ ಬಿಡುಗಡೆಗಾಗಿ 15000 ರೂ ಲಂಚದ ಬೇಡಿಕೆ ಇಟ್ಟಿದ್ದು ಸದರಿ ಲಂಚದ ಬೇಡಿಕೆ ಸಂಬಂಧಪಟ್ಟಂತೆ ಅಂದಿನ ಎ.ಸಿ.ಬಿ. ಪೋಲಿಸ ಠಾಣೆಗೆ ದೂರು ಸಲ್ಲಿಸಿದ್ದರು.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದು ಅಂದಿನ ಎ.ಸಿ.ಬಿ. ಪೋಲಿಸರು ಆಪಾದಿತ ಮಹ್ಮದ ಖಾಜಾ ( ಪಿ ಡಿ ಓ ) 15,000 ಲಂಚ ಪಡೆಯುವ ಸಮಯದಲ್ಲಿ ಟ್ರಾಪ್ ಮಾಡಿ ಲಂಚದ ಸಮೇತ ಪಿ ಡಿ ಓ ನನ್ನು ಬಂಧಿಸಿದ್ದು ನಂತರ ಆಗಿನ ಪೋಲಿಸ್ ಇನ್ಸಪೆಕ್ಟರ್ ಶ್ರೀಧರ ದೊಡ್ಡಿ ಇವರು ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ನ್ಯಾಯಾಲಯವು ವಾದ ವಿವಾದಗಳನ್ನು ಆಲಿಸಿ 3ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ರಾಯಚೂರು ಫೀತಾಸೀನ ಲಿಂಗಸಗೂರು ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ರವರು ಇಂದು ಆರೋಪಿ ಗೋರೆಬಾಳ ಗ್ರಾಮ ಪಂಚಾಯತಿ ಪಿಡಿಓ ಮಹ್ಮದ ಖಾಜಾ ಈತನಿಗೆ ಭ್ರಷ್ಟಚಾರ ಪ್ರತಿಬಂಧ ಕಾಯ್ದೆ 1988 ರ ಕಲಂ 7 ರಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ಹಾಗೂ ಕಲಂ 13(1)(ಡಿ) ಸಹಿತ 13(2) ಅಡಿಯಲ್ಲಿ 4ವರ್ಷ ಜೈಲು ಶಿಕ್ಷೆ 50,000 ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಪಿ ಡಿ ಓ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿದ್ದು ಸರಕಾರಿ ಅಭಿಯೋಜಕರು ಪಿ ಡಿ ಓ ಮೇಲೆ ಪ್ರತಿಕೂಲ ಸಾಕ್ಷೀ ನೀಡಿದ್ದಕ್ಕಾಗಿ ಕ್ರಮ ಕೈಕೊಳ್ಳುವಂತೆ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯದ ಶಿರಸ್ತೇದಾರರಿಗೆ ದೂರುದಾರಾನಾದ ಚೇತನ ತಂದೆ ಲೋಕಪ್ಪ ಗೊರೇಬಾಳ ತಾಂಡಾ ಇವರ ಮೇಲೆ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷೀ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿರುತ್ತಾರೆ . ಲೋಕಾಯುಕ್ತ ಪರವಾಗಿ ಕೆ.ಬಸವರಾಜ ಹೊಸಳ್ಳಿ (ಕೆ) ಸರಕಾರಿ ಅಭಿಯೋಜಕರು ಲಿಂಗಸಗೂರು ರವರು ವಾದ ಮಂಡಿರುತ್ತಾರೆ. ಹಾಗೂ ಅಯ್ಯಪ್ಪ ಪೋಲಿಸ್ ಪೇದೆ ಸಾಕ್ಷೀದಾರರನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯದಲ್ಲಿ ಹಾಜರಪಸಿರುತ್ತಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply

Your email address will not be published. Required fields are marked *