ಲಿಂಗಸಗೂರು . ಏ 11 – ಲಿಂಗಸಗೂರು ಪೋಲಿಸ್ ಠಾಣಾ ವ್ಯಾಪ್ತಿಯ ಗುಡದನಾಳ ಗ್ರಾಮದ ಆರೋಪಿತನಾದ ಜಗದೀಶ ತಂದೆ ಶರಣಪ್ಪ, ಯಮನೂರ ತಂದೆ ಅಮರಪ್ಪ, ಮಹಾಂಕಾಳಪ್ಪ ತಂದೆ ಅಮರಪ್ಪ, ಬಸವರಾಜ ತಂದೆ ಶರಣಪ್ಪ ದೊಡ್ಡಮನಿ, ಹನುಮಂತಿ ಗಂಡ ಅಮರಪ್ಪ, ದುರುಗಪ್ಪ ತಂದೆ ನಿಂಗಪ್ಪ, ಶರಣಬಸವ ತಂದೆ ಮಾನಪ್ಪ, ಕೆಂಚವ್ವ @ ಕೆಂಚಮ್ಮ ಗಂಡ ಮಾನಪ್ಪ ಯಲ್ಲವ್ವ @ ಯಲ್ಲಮ್ಮ ಗಂಡ ನಿಂಗಪ್ಪ, ನಿಂಗಪ್ಪ ತಂದೆ ಅಮರಪ್ಪ @ ದುರುಗಪ್ಪ ದೊಡ್ಡಮನಿ ಎಲ್ಲರೂ ಜೀವಾವದಿ ಶಿಕ್ಷೆಗೆ ಗುರಿಯಾದ ಆರೋಪಿಗಳು
ಗುಡದನಾಳ ಗ್ರಾಮದ ಹನಮಂತಮ್ಮ ತಾಯಿ ಹುಲಿಗೆಮ್ಮ ಹೊಸಮನಿ ಇವರ ನಡುವೆ
ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ವೈಷಮ್ಯವಿದ್ದು ಈ ವಿಚಾರವಾಗಿ 2021ರಂದು ಹನುಮಂತಮ್ಮ ತಾಯಿ ಹುಲಿಗೆಮ್ಮ ಹೊಸಮನಿ ಮಕ್ಕಳಾದ ಮೃತ ಶರಣಬಸವ ಮತ್ತು ಅಮರೇಶ ತಾಯಿ ಹನುಮಂತಮ್ಮ ಹೊಸಮನಿ ಇವರುಗಳು ಮನೆಯ ಮುಂದೆ ಇದ್ದಾಗ
ಎಲ್ಲಾ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಹನುಮಂತಮ್ಮ ತಾಯಿ ಹುಲಿಗೆಮ್ಮ ಇವರನ್ನು ಮತ್ತು ಇವರ ಮಕ್ಕಳನ್ನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಕಟ್ಟಿಗೆ ಕೊಡಲಿ ಕಾವು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿತರೆಲ್ಲರೂ ಕಲ್ಲು, ಕಟ್ಟಿಗೆ, ಕೊಡಲಿ ಕಾವಿನಿಂದ ಮೃತ ಶರಣ ಬಸವನ ಮೇಲೆ ಹಲ್ಲೆ ಮಾಡಿದ್ದು, ಹನುಮಂತಮ್ಮ ಹಾಗೂ ಅಮರೇಶ ಈತನಿಗೂ ಕೂಡ ಹಲ್ಲೆ ಮಾಡಿದ್ದು, ನಂತರ ಗಾಯಾಳು ಶರಣ ಬಸವ ಈತನನ್ನು ಲಿಂಗಸಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿ ಮುಂದಿನ ಚಿಕಿತ್ಸೆ ಗೆ ಬಾಗಲಕೋಟೆಯ ಕೇರೋಡಿ ಆಸ್ಪತ್ರೆ ಗೆ ಸೇರಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರಿಂದ ಹನಮಂತಮ್ಮ ಇವರು ನೀಡಿದ ದೂರಿನ ಆಧಾರದ ಮೇಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಈ ಪ್ರಕರಣದ ತನಿಖೆಯನ್ನು ಲಿಂಗಸಗೂರು ವೃತ್ತದ ಅಂದಿನ ತನಿಖಾಧಿಕಾರಿ ಮಹಾಂತೇಶ ಸಜ್ಜನ ಸಿಪಿಐ ಮತ್ತು ರಮೇಶ ಕುಲ್ಕರ್ಣಿ ಸಿಪಿಐ ಇವರು ಪ್ರಕರಣದ ತನಿಖೆ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.
ವಾದ ವಿವಾದಗಳನ್ನು ಆಲಿಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯ ರಾಯಚೂರು, ಪೀಠಾಸಿನ ಲಿಂಗಸಗೂರು ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ ಜಕಾತಿ ರವರು ಇಂದು ಎಲ್ಲ 10 ಜನ ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ ರೂ.19.500 /- ರೂ ದಂಡ ವಿಧಿಸಿ ತಿರ್ಪು ನೀಡಿದ್ದಾರೆ . ಸರ್ಕಾರದ ಪರವಾಗಿ ಮಂಜುನಾಥ ಬೇರ್ಗಿ (ಹುಳ್ಕಿಹಾಳ್) ಸರ್ಕಾರಿ ಅಭಿಯೋಜಕರು, ವಾದ ಮಂಡಿಸಿರುತ್ತಾರೆ ಹಾಗೂ ನಿಂಗಯ್ಯ ಮತ್ತು ಮಂಜುನಾಥ ಪೊಲೀಸ್ ಪೇದೆಗಳು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯದಲ್ಲಿ ಹಾಜರುಪಡಿಸಿರುತ್ತಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply

Your email address will not be published. Required fields are marked *