ಸಿಂಧನೂರು : ಮಕ್ಕಳಲ್ಲಿ ಅತಿಸಾರ ನಿರ್ವಹಣೆಗಾಗಿ ಸೇವಿಸುವ ಆಹಾರ ಪದಾರ್ಥಗಳನ್ನು ಹೆಚ್ಚು ಕಾಳಜಿ ಹಾಗೂ ಯಾವುದೇ ಕಾರಣಲ್ಕೂ ದೇಹದಲ್ಲಿನ ನೀರಿನಂಶದ ಕೊರತೆ ಉಂಟಾಗದಂತೆ ನಿಗಾವಹಿಸಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮೇರಿ ತಿಳಿಸಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರುನ ನಗರದ ವಾರ್ಡ್ ನಂಬರ್ 23ರ ಅಂಗನವಾಡಿ ಕೇಂದ್ರದಲ್ಲಿ ಅತಿಸಾರ ಬೇಧಿ ಕುರಿತು ಜಾಗೃತಿ ನೀಡಿ ಮಾತನಾಡುತ್ತಾ, ಸಾಮಾನ್ಯವಾಗಿ 5 ವರ್ಷದೊಳಗಿನ ಮಕ್ಕಳನ್ನು ಅತಸಾರ ಬೇಧಿಯಿಂದ ಸಂರಕ್ಷಿಸುವ ದಿಶೆಯಲ್ಲಿ ಆಹಾರ ಸಿದ್ದಪಡಿಸುವ ಹಾಗೂ ಉಣಿಸುವ ಪೂರ್ವದಲ್ಲಿ ತಾಯಿ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಎಂದು ವಿನಂತಿಸಿದರು.
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ದಿನನಿತ್ಯ ಆಹಾರ ಸಿದ್ದಪಡಿಸುವಾಗ ಶುಧ್ದವಾದ ನೀರು ಬಳಕೆ, ಸಿದ್ದಪಡಿಸಿದ ಆಹಾರ ಪದಾರ್ಥ ಮುಚ್ಚಿಡಲು ನಿಗಾವಹಿಸಬೇಕು. ಮುಖ್ಯವಾಗಿ ಬೇಧಿಯ ಪ್ರಕರಣಗಳಲ್ಲಿ ಮಕ್ಕಳ ಕಣ್ಣುಗಳು ಒಳಕ್ಕೆ ಹೋಗಿರುವುದು, ಕುಡಿಯಲು ಸಾಧ್ಯವಾಗದೇ ಇರುವುದು ಅಥವಾ ಕಡಿಮೆ ಕುಡಿಯುವುದು, ಚರ್ಮವನ್ನು ಚುವುಟಿದರೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರುವದು ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು, ಹೆಚ್ಚು ಓಆ‌‌ರ್‌ಎಸ್‌ ದ್ರಾವಣ ಕುಡಿಸಬೇಕು. ಇದರೊಂದಿಗೆ ಮಗುವಿನ ವಯಸ್ಸಿನ ಅನುಸಾರ ಮನೆಯಲ್ಲಿ ತಯಾರಿಸಿದ ಗಂಜಿ, ಬೇಳೆ ತಿಳಿ, ಕೊಡಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ತ್ರೆಜಾ ಪಿಹೆಚ್‌ಸಿಓ, ಕಸ್ತೂರಿ ಆಶಾ ಕಾರ್ಯಕರ್ತೆ, ಪದ್ಮಾ, ಅಂಗನವಾಡಿ ಕಾರ್ಯಕರ್ತೆ, ರಾಜ್ಮಾ ಅಂಗನವಾಡಿ ಸಹಾಯಕಿ ಗರ್ಭಿಣಿ ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *