ಮಾನ್ವಿ: ತಾಲೂಕಿನ ಅಡವಿ ಅಮರೇಶ್ವರ ಗ್ರಾಮದಲ್ಲಿನ ಸುವರ್ಣಗಿರಿ ವಿರಕ್ತಮಠ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ ಮಂಗಳವಾರ ಸಂಜೆ 72 ನೇ ಜಾತ್ರ ಮಹೋತ್ಸವ ಹಾಗೂ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನದರ್ಶನ ಪ್ರವಚನ ಮಂಗಲ ಕಾರ್ಯಕ್ರಮ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ನಿವೃತ್ತ ಡಿ.ಜಿ.ಪಿ. ಮಾತನಾಡಿ ರಾಯಚೂರು ಜಿಲ್ಲೆಯು ಅನೇಕ ಶರಣರನ್ನು ಸಂತರನ್ನು ಕಂಡ ಪುಣ್ಯಭೂಮಿಯಾಗಿದೆ ಈ ಭಾಗದಲ್ಲಿನ ಮಠಗಳು ಜನರಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿವೆ ಈ ಭಾಗದಲ್ಲಿ ಅನೇಕ ರಾಜರು,ನವಾಬರು ಆಳಿದರು ಕೂಡ ಜನರು ಅವರನ್ನು ಇಂದು ಸಮ್ಮರಿಸುತ್ತಿಲ್ಲ ಅದ್ದರೆ ಯಾರು ಸಮಾಜಕ್ಕಾಗಿ ತಮ್ಮದೆಲ್ಲವನ್ನು ತ್ಯಾಗಮಾಡಿ ಪರಿಶ್ರಮದಿಂದ,ನಿಸ್ವಾರ್ಥವಾಗಿ, ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಾರೋ ಅವರನ್ನು ಸಮಾಜ ಕೂಡ ಸಮರ್ಪಣ ಭಾವದಿಂದ ಸ್ಮರಿಸಿಕೊಳ್ಳುತ್ತದೆ. ಮಠಗಳೆಂದರೆ ಶಾಲೆ,ಕಾಲೇಜುಗಳಿಂದ ಭವ್ಯವಾದ ಕಟ್ಟಡಗಳಿಂದಾಗುವುದಿಲ್ಲ ಮಠದಲ್ಲಿನ ಸ್ವಾಮಿಗಳ ಚಾರಿತ್ರö್ಯದಿಂದ .ಸಂಸ್ಕಾರದಿAದ , ತಪ್ಪಶಕ್ತಿಯಿಂದ ,ಪೂಜಾನಿಷ್ಠೆಯಿಂದ ಮಾತ್ರ ಮಠಗಳು ಅಭಿವೃದ್ದಿ ಹೊಂದುತ್ತವೆ. ಸಮಾಜದ ಅಭಿವೃದ್ದಿಗೆ ಮಠಗಳ ಕೋಡುಗೆ ಅಪಾರವಾಗಿದ್ದು. ಇಂದು ಮಠಗಳು ಸಮಾಜದಲ್ಲಿನ ದಲಿತರು, ಬಡವರು,ಶ್ರೀಮಂತರು,ಮಕ್ಕಳು,ಮಹಿಳೆಯರು ಸೇರಿದಂತೆ ಎಲ್ಲಾರನ್ನು ಸಮಾನವಾಗಿ ಅದಾರಿಸುತ್ತಿವೆ. ಭಕ್ತರಿಂದ ,ಭಕ್ತರಿಗಾಗಿ ಇರುವ ಕ್ಷೇತ್ರಗಳು ಮಠಗಳಾಗಿದು. ಶ್ರೀಮಠದ ಸ್ವಾಮಿಗಳು ಭಕ್ತರಿಂದ ಕೃಡಿಕರಿಸಿದ್ದನ್ನು ಭಕ್ತರ ಉದ್ದಾರಕ್ಕಾಗಿ ವಿನಿಯೋಗಿಸುತ್ತ ಬಂದಿದ್ದಾರೆ. ಶ್ರೀಮಂತಿಕೆ ಎಂದು ಕೂಡ ಶಾಶ್ವತವಾಗಿ ಉಳಿಯುವುದಿಲ್ಲ ನಮ್ಮಲಿನ ಆಚಾರ ,ವಿಚಾರಗಳು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಶ್ರೀ ಅಡವಿ ಅಮರೇಶ್ವರ ಮಠ ಮುಂದಿನ ದಿನಮಾನಗಳಲ್ಲಿ ಮಹಾತ್ತರವಾದ ಪುಣ್ಯಕ್ಷೇತ್ರವಾಗಿ ಬೆಳಗಲಿ ಎಂದು ತಿಳಿಸಿದರು.
ಬೂದುಗುಂಪ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನದರ್ಶನ ಪ್ರವಚನ ನೀಡಿದರು.ಸಂಗೀತವನ್ನು ಅಮರೇಶ ಸಾಲಿಮಠ ಗವಾಯಿಗಳು ನೀಡಿದರು.
ಕಿಷ್ಕಿಂದ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೆಟ್ ಪಡೆದ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಶ್ರೀ ಡಾ.ಸಿದ್ದಲಿಂಗ ಮಹಾಸ್ವಾಮಿಗಳಿಗೆ ಶ್ರೀಮಠ ಹಾಗೂ ಭಕ್ತರಿಂದ ಗುರುವಂದನೆ ಸಲ್ಲಿಸಲಾಯಿತು.
ಶ್ರೀಮಠದ ವತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ನಿವೃತ್ತ ಡಿ.ಜಿ.ಪಿ. ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮಠದ ಆಬಿವೃದ್ದಿಗೆ 21 ಲಕ್ಷ ರೂ ದೇಣಿಗೆ ನೀಡಿದ ಮಹಾದಾನಿಗಳಾದ ಹಿರಿಯ ವಕೀಲರಾದ ಸಿದ್ದಲಿಂಗಪ್ಪ ದಂಪತಿಗಳನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸುವರ್ಣಗಿರಿ ವಿರಕ್ತಮಠ ಯದ್ದಲದಿನ್ನಿ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿAಗ ಮಹಾಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠ ಒಳ್ಳಬಳ್ಳಾರಿಯ ಕಿರಿಯ ಶ್ರೀಗಳಾದ ಬಸವಲಿಂಗ ಮಹಾಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠ ಶ್ರೀ ಅಡವಿ ಅಮರೇಶ್ವರ ಮಠದ ಶ್ರೀ ತೊಂಟದಾರ್ಯ ಮಹಾಸ್ವಾಮಿಗಳು, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಮಾಜಿ ಕೃಷಿ ಬೆಲೆ ಅಯೋಗದ ಮಾಜಿ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ, ಮಾಜಿ ಜಿ.ಪಂ. ಅಧ್ಯಕ್ಷರಾದ ದೊಡ್ಡಬಸಪ್ಪಗೌಡ ಭೋಗವತಿ. ಸೇರಿದಂತೆ ಶ್ರೀಮಠದ ಭಕ್ತರು ಭಾಗವಹಿಸಿದರು.
8-ಮಾನ್ವಿ-1:
ಮಾನ್ವಿ: ತಾಲೂಕಿನ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಸಿದ್ದಲಿಂಗ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
8-ಮಾನ್ವಿ-2:
ಮಾನ್ವಿ: ತಾಲೂಕಿನ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ಡಿ.ಜಿ.ಪಿ. ಶಂಕರ ಬಿದರಿ ಮಾತನಾಡಿದರು.
8-ಮಾನ್ವಿ-3:
ಮಾನ್ವಿ: ತಾಲೂಕಿನ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ 72 ನೇ ವರ್ಷದ ಜಾತ್ರಮಹೋತ್ಸವ ನಡೆಯಿತು.

Leave a Reply

Your email address will not be published. Required fields are marked *