ರಾಯಚೂರು ಏಪ್ರಿಲ್ 08 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 1ರ ವ್ಯಾಪ್ತಿಗೆ ಬರುವ ಶಾಖೆ 2ರಲ್ಲಿ ರಸ್ತೆ ಕಾಮಗಾರಿ ನಿರ್ವಾಹಿಸುತ್ತಿರುವ ಪ್ರಯುಕ್ತ ಏಪ್ರಿಲ್-8ರ ಬೆಳಿಗ್ಗೆ 09:30 ಗಂಟೆಯಿಂದ ಸಾಯಂಕಾಲ 05:30 ಗಂಟೆವರೆಗೆ ಗೌಸಿಯಾ ಕಾಲೋನಿ, ಮಿನರಲ್ ವಟರ್ ಪ್ಲಾಂಟ್ ಅತಿರ, ಬಂದೇನವಾಜ್ ಕಾಲೋನಿ, ಎಕ್ಲಸ್ಪುರ್ ರಸ್ತೆ, ಚೌದರಿ ಲೇಔಟ್, ಗಾಂಧಿ ಲೇಔಟ್, ಹೇಮಾ ಪ್ರೆöಡ್, ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

