ರಾಯಚೂರು ಎ 08 : ರಾಯಚೂರಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಭಾರತದ ಪ್ರಧಾನಮಂತ್ರಿ Narendra Modi ಅವರಿಗೆ ಕರ್ನಾಟಕ ರಾಜ್ಯಪಾಲರಾದ Thawar Chand Gehlot ಅವರನ್ನು ಹಿಂತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಈ ಮನವಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕದ ವತಿಯಿಂದ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ವಿನೋದ್ ರೆಡ್ಡಿ ಮಾತನಾಡಿ, ರಾಜ್ಯಪಾಲರು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಜನರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು, ಅದನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ಆಕ್ಷೇಪಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕ್ರಮವು ಕರ್ನಾಟಕದಲ್ಲಿ ಹಿಂದಿ ಹೇರಲು ಪ್ರಯತ್ನವಾಗಿದೆಯೆಂಬ ಅನುಮಾನ ವ್ಯಕ್ತವಾಗಿದೆ ಎಂದರು.

ರಾಜ್ಯಪಾಲರು ತಮ್ಮ ಸಂವಿಧಾನಬದ್ಧ ವ್ಯಾಪ್ತಿಯನ್ನು ಮೀರಿ ನಡೆದುಕೊಂಡಿದ್ದು, ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ರಾಜ್ಯಪಾಲರ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕದ ನೀತಿಗಳನ್ನು ರಾಜ್ಯದ ಜನತೆ ಆಯ್ಕೆ ಮಾಡಿದ ಸರ್ಕಾರವೇ ತೀರ್ಮಾನಿಸಬೇಕು. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಕ್ರಮವನ್ನು ತೀವ್ರವಾಗಿ ವಿರೋಧಿಸಲಾಗುವುದು ಎಂದು ಎಚ್ಚರಿಸಿದರು.

👉 ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು:
ವಿನೋದ್ ರೆಡ್ಡಿ (ಜಿಲ್ಲಾಧ್ಯಕ್ಷರು), ನಂದಪ್ಪ ಪಿ ಮಡ್ಡಿ (ಅಧ್ಯಕ್ಷರು, ದೇವದುರ್ಗ), ಗುರುನಾಥ್ ರೆಡ್ಡಿ (ತಾಲೂಕು ಕಾರ್ಯದರ್ಶಿ), ರಂಗಪ್ಪ ಬಂಡಿ, ತಮ್ಮಣ್ಣ ಹರುಂಡಿ (ಜಾಲಹಳ್ಳಿ ಹೋಬಳಿ ಘಟಕ ಅಧ್ಯಕ್ಷರು), ಬಾಬುಸಾಬ್ (ಕೊಪ್ಪೂರು ಗ್ರಾಮ ಘಟಕ ಅಧ್ಯಕ್ಷರು), ರುದ್ರಯ್ಯ ಸ್ವಾಮಿ (ಲಿಂಗಸುಗೂರು ಘಟಕ ಅಧ್ಯಕ್ಷರು), ದುರ್ಗಾರಾಜ್ (ಮಸ್ಕಿ ತಾಲೂಕು ಅಧ್ಯಕ್ಷರು), ರಾಜೇಶ್ ಸಾಬ್ (ಸಿಂಧನೂರು ತಾಲೂಕು ಅಧ್ಯಕ್ಷರು), ಬಸನಗೌಡ (ಮಾನ್ವಿ ತಾಲೂಕು ಅಧ್ಯಕ್ಷರು), ರಂಗಣ್ಣ ಗಾಲಿ (ಅರಕೆರೆ ಘಟಕ ಅಧ್ಯಕ್ಷರು), ವೀರೇಶ್ (ರಾಯಚೂರು ತಾಲೂಕು ಅಧ್ಯಕ್ಷರು), ಹಾಗೂ ಸಾಬಣ್ಣ ಅರಕೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *