ತಾಳಿಕೋಟಿ: ರೈತರು ರಾಸಾಯನಿಕ ಗೊಬ್ಬರವನ್ನು ಅತಿಯಾಗಿ ಬಳಸುತ್ತಿರುವುದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಆದ್ದರಿಂದ ಸಾವಯವ ಕೃಷಿಯನ್ನು ಬಳಸಿಕೊಂಡು ಭೂಮಿಯ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಬಿಎಸ್ ಪಾಟೀಲ ಯಾಳಗಿ ಹೇಳಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡ ರೈತರಿಗೆ ತಾಡಪಾಲು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ ನಮ್ಮ ರೈತರು ಕೃಷಿಯ ಜೊತೆಗೆ ಪಶುಪಾಲನೆ ಮತ್ತು ಹೈನುಗಾರಿಕೆಯನ್ನು ಅಳವಡಿಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೈತರಿಗಾಗಿ ಹಲವಾರು ಯೋಜನೆಗಳಿವೆ ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು. ಕೃಷಿ ಅಧಿಕಾರಿ ಮಹೇಶ್ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ ಇವತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಕೃಷಿ ಸಂಸ್ಕರಣೆ ಘಟಕದಡಿ ತಾಡಪಾಲುಗಳನ್ನು ವಿತರಿಸಲಾಗುತ್ತಿದೆ ಈ ಬಾರಿ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾದ ಕಾರಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಅಬ್ದುಲ್ ಗನಿಸಾಬ ಲಾಹೋರಿ, ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ, ಸಿದ್ರಾಮಪ್ಪ ಚೌದ್ರಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಸಿಬ್ಬಂದಿಗಳಾದ ಸಂಗಮೇಶ ಪಾಟೀಲ, ರುಕ್ಸಾನಾ ತಾಳಿಕೋಟಿ, ಕಿರಣ ಬೊಮ್ಮನಹಳ್ಳಿ, ಹನುಮಂತ್ರಾಯ ಕುಂಟರೆಡ್ಡಿ, ವಿರುಪಾಕ್ಷ ನಂದಿಕೋಲ, ರವಿ ಹೊಸಮನಿ, ಬಸವರಾಜ ಜಾಲವಾದಿ, ರಾಮಣ್ಣ ಹರಿಜನ್ ಹಾಗೂ ವಿವಿಧ ಗ್ರಾಮಗಳ ರೈತರು ಮತ್ತು ಕೃಷಿ ಸಖಿಯರು ಭಾಗವಹಿಸಿದ್ದರು.

